ಕಡಬ: ಮದುವೆಯಾದ ಅಪ್ರಾಪ್ತ ಬಾಲಕಿ ಗರ್ಭವತಿ ➤ ಪತಿ ಹಾಗೂ ಇತರರ ವಿರುದ್ಧ ಕೇಸ್

(ನ್ಯೂಸ್ ಕಡಬ) newskadaba.com ಕಡಬ, ಸೆ.12. ಅಪ್ರಾಪ್ತ ಬಾಲಕಿಯನ್ನು ಮದುವೆಯಾದ ಪರಿಣಾಮ ಆಕೆ ಇದೀಗ ಗರ್ಭವತಿಯಾದ ಘಟನೆ ಠಾಣಾ ವ್ಯಾಪ್ತಿಯ ಕೊಂಬಾರು ಎಂಬಲ್ಲಿ ಗುರುವಾರದಂದು ಬೆಳಕಿಗೆ ಬಂದಿದ್ದು, ಪತಿ ಹಾಗೂ ಮತ್ತಿತರರ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಂಬಾರು ಗ್ರಾಮದ ಕೊಲ್ಕಜೆ ನಿವಾಸಿ ಭುವನೇಶ್ವರ ಎಂಬಾತ ಸುಮಾರು ಐದು ತಿಂಗಳ ಹಿಂದೆ ಅಪ್ರಾಪ್ತ ಬಾಲಕಿಯೋರ್ವಳನ್ನು ಮದುವೆಯಾಗಿದ್ದು, ಇದೀಗ ಆಕೆ ಗರ್ಭಿಣಿಯಾಗಿದ್ದಾಳೆ. ತಪಾಸಣೆಗೆಂದು ಆಸ್ಪತ್ರೆಗೆ ತೆರಳಿದ ವೇಳೆ ಹದಿನೆಂಟು ವರ್ಷ ಪೂರ್ತಿಯಾಗದ ಬಗ್ಗೆ ದಾಖಲಾತಿಯಲ್ಲಿ ಕಂಡುಬಂದಿದ್ದು, ಈ ಬಗ್ಗೆ ವೈದ್ಯರು ಶಿಶು ಅಭಿವೃದ್ಧಿ ಇಲಾಖೆಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕೊಂಬಾರು ಗ್ರಾಮದ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಯ ಅಧ್ಯಕ್ಷೆ, ಬಾಲಕಿಯ ಪತಿ ಭುವನೇಶ್ವರ ಹಾಗೂ ಮತ್ತಿತರರ ವಿರುದ್ಧ ಕಡಬ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿಕೊಂಡಿರುವ ಕಡಬ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Also Read  ಗಂಡಿಬಾಗಿಲು: ಬಕ್ರೀದ್ ಆಚರಣೆ ➤ ಕುಟುಂಬ ಬಂಧುತ್ವವನ್ನು ಆರಾಧಿಸು, ಅನ್ಯ ಧರ್ಮವನ್ನು ಗೌರವಿಸು-ಅನಸ್ ತಂಙಳ್

 

error: Content is protected !!
Scroll to Top