ಕಡಬದ ಹಿರಿಯ ಧಾರ್ಮಿಕ ಮುಂದಾಳು ಬೆದ್ರಾಜೆ ದಾಮೋದರ್ ರೈ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಸೆ.12. ಹಿರಿಯ ಧಾರ್ಮಿಕ ಮುಂದಾಳು, ಕಡಬ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯ ಸ್ಥಾಪಕರಾದ ಬೆದ್ರಾಜೆ ಶ್ರೀ ದಾಮೋದರ ರೈ ಅಲ್ಪಕಾಲದ ಅನಾರೋಗ್ಯದಿಂದ ಗುರುವಾರದಂದು ನಿಧನರಾದರು.

ಅವರಿಗೆ 93 ವರ್ಷ ಪ್ರಾಯವಾಗಿತ್ತು. ಸುಮಾರು 56 ವರ್ಷಗಳ ಹಿಂದೆ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಭಜನೆಯನ್ನು ಪ್ರಾರಂಭಿಸಿ, ಆ ಬಳಿಕ ಕಡಬದಲ್ಲಿ ಏಕಾಹ ಭಜನೆಯನ್ನು ಆರಂಭಗೊಳ್ಳಲು ಕಾರಣಕರ್ತರಾಗಿದ್ದರು. ಧಾರ್ಮಿಕ ಕ್ಷೇತ್ರದಲ್ಲಿ ಅವಿರತ ಶ್ರಮವಹಿಸಿದ್ದ ಅವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರದಂದು ವಿಧಿವಶರಾಗಿದ್ದಾರೆ.

Also Read  ಕುಟ್ರುಪ್ಪಾಡಿ ಸೇರಿದಂತೆ ಹಲವು ಗ್ರಾಮ ಪಂಚಾಯತ್ ಗಳಿಗೆ ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ಲಕ್ಷಾಂತರ ರೂ. ವಂಚನೆ ► ಕಡಬದ ಅಂತಿಬೆಟ್ಟು ನಿವಾಸಿ ಬಂಧನ

error: Content is protected !!
Scroll to Top