➤➤ Breaking News ಕಡಬ: ರಿಕ್ಷಾ ಢಿಕ್ಕಿ – ಪಾದಚಾರಿ ಮೃತ್ಯು ➤ ಓರ್ವನಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಸೆ.11. ಆಟೋರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ವ್ಯಕ್ತಿಯೋರ್ವರು ಮೃತಪಟ್ಟು, ಓರ್ವ ಗಾಯಗೊಂಡ ಘಟನೆ ಕಡಬ ಹಿಂದೂಸ್ತಾನ್ ಪೆಟ್ರೋಲ್ ಬಂಕ್ ಮುಂಭಾಗ ಬುಧವಾರ ರಾತ್ರಿ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಮಂಗಳೂರು ತಾಲೂಕಿನ ನರಿಂಗಾನ ಗ್ರಾಮದ ಮೊಂಟೆಪದವು ಸಮೀಪದ ಚಂದಹಿತ್ಲು ನಿವಾಸಿ ಅಬ್ಬಾಸ್(53) ಎಂದು ಗುರುತಿಸಲಾಗಿದೆ. ಇವರು ಬುಧವಾರದಂದು ಸಾಫ್ಟ್ ಡ್ರಿಂಕ್ ಪಿಕಪ್ ನಲ್ಲಿ ಕಡಬಕ್ಕೆ ಆಗಮಿಸಿದ್ದು, ಪಿಕಪ್ ವಾಹನ ದುರಸ್ತಿಯಿದ್ದ ಕಾರಣ ಗ್ಯಾರೇಜ್ ನಲ್ಲಿ ನಿಲ್ಲಿಸಿ ಊಟ ತರಲೆಂದು ತೆರಳುತ್ತಿದ್ದಾಗ ಆಟೋ ರಿಕ್ಷಾ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಅಬ್ಬಾಸ್ ರವರನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಕಡಬದ 108 ಆಂಬ್ಯುಲೆನ್ಸ್ ಮೂಲಕ ಮಂಗಳೂರಿಗೆ ಕರೆದೊಯ್ಯುತ್ತಿದ್ದ ಹಾದಿ ಮಧ್ಯೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಕಾರ್ಕಳ: ದ್ವಿಚಕ್ರ ವಾಹನ -ಟಿಪ್ಪರ್ ನಡುವೆ ಅಪಘಾತ ➤ ಓರ್ವ ಮಹಿಳೆ ಮೃತ್ಯು

Gems

error: Content is protected !!
Scroll to Top