ಡಿಕೆಶಿ ಬಂಧನ ವಿರೋಧಿಸಿ ನಾಳೆ ಕಡಬದಲ್ಲಿ ಪ್ರತಿಭಟನೆ ➤ ಪ್ರತಿಭಟನೆಗೆ ಕಡಬ ಒಕ್ಕಲಿಗ ಗೌಡ ಸಂಘದ ಬೆಂಬಲ ಇಲ್ಲ

(ನ್ಯೂಸ್ ಕಡಬ) newskadaba.com ಕಡಬ, ಸೆ.11. ರಾಜ್ಯದ ಮಾಜಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಕಡಬ ತಾಲೂಕು ಒಕ್ಕಲಿಗ ಸಮುದಾಯ ಮತ್ತು ಜಾತ್ಯಾತೀತ ಸಾರ್ವಜನಿಕ ಅಭಿಮಾನಿ ಬಳಗದವರ ನೇತೃತ್ವದಲ್ಲಿ ಸೆ.12ರಂದು ಅಪರಾಹ್ನ ಕಡಬದಲ್ಲಿ ನಡೆಯಲಿರುವ ಪ್ರತಿಭಟನೆಗೆ ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಬೆಂಬಲವಿಲ್ಲ. ಸಂಘವು ಯಾವುದೇ ರಾಜಕೀಯ ಚಟುವಟಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸಂಘದ ಅಧ್ಯಕ್ಷ ತಮ್ಮಯ್ಯ ಗೌಡ ಸಂಘದ ತುರ್ತು
ಸಭೆಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿ, ರಾಜಕೀಯ ವಿಚಾರಗಳಿಗೆ ಪ್ರತಿಭಟನೆ ಮಾಡಲು ಬೇರೆ ರೀತಿಯ ಸಂಘಟನೆ ಮಾಡುವುದು ಒಳ್ಳೆಯದು. ಒಕ್ಕಲಿಗ ಗೌಡ ಸಂಘದಲ್ಲಿ ಯಾವುದೇ ರಾಜಕೀಯ ಇಲ್ಲ. ಬೇರೆ ಬೇರೆ
ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡವರು ಇದ್ದಾರೆ. ಆದರೆ ಸಂಘಟನೆಯ ಒಳಗೆ ರಾಜಕೀಯ ಇಲ್ಲ. ಈ ಹಿನ್ನಲೆಯಲ್ಲಿ ಸೆ.12ರಂದು ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಒಕ್ಕಲಿಗ ಸಮುದಾಯಯ ಹಾಗೂ ಅಭಿಮಾನಿ ಬಳಗದಿಂದ ಪ್ರತಿಭಟನೆ ನಡೆಯಲಿದೆ ಎಂದು ಪ್ರಕಟಿಸಲಾಗಿದೆ. ಇಲ್ಲಿ ಗೌಡ ಸಮುದಾಯದ ಹೆಸರು ಉಲ್ಲೇಖಿಸಿ ಸಂಘಟನೆ ಒಳಗಡೆ ರಾಜಕೀಯ ವಿಷ ಬೀಜ ಬಿತ್ತುವ ಹುನ್ನಾರ ನಡೆದಿದೆ. ಇದಕ್ಕೆ ಅವಕಾಶವಿಲ್ಲ. ಪ್ರತಿಭಟನೆಗೂ ಒಕ್ಕಲಿಗ ಗೌಡ ಸಂಘಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸಭೆಯಲ್ಲಿ ಸ್ಪಷ್ಟಪಡಿಸಿದರು.

Also Read  ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಕಾಂಗ್ರೆಸ್ ಗೆ ಗುಡ್ ಬೈ...!

ಈ ಸಂದರ್ಭದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕೊಲಂತ್ತಾಡಿ, ಕೋಶಾಧಿಕಾರಿ ಜಯರಾಮ ಆರ್ತಿಲ, ಯುವ ಸಮಿತಿಯ ಅಧ್ಯಕ್ಷ ಮೋಹನ ಕೋಡಿಂಬಾಳ, ಪ್ರಮುಖರಾದ ಸೀತಾರಾಮ ಗೌಡ ಪೊಸವಳಿಕೆ ಉಪಸ್ಥಿತರಿದ್ದರು.

error: Content is protected !!
Scroll to Top