ಜೇಸಿಐ ಕಡಬ ಕದಂಬ ಘಟಕದ ಜೇಸಿ ಸಪ್ತಾಹ ‘ಕದಂಬೋತ್ಸವ’ ಉದ್ಘಾಟನೆ ➤ ಕುಂತೂರು ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ತರಬೇತಿ ಶಿಬಿರ

(ನ್ಯೂಸ್ ಕಡಬ) newskadaba.com ಕಡಬ, ಸೆ.09. ಯುವಜನತೆ ಉನ್ನತ ತರಬೇತಿಯ ಮೂಲಕ ಸದೃಢಗೊಂಡಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಹೇಳಿದರು.

ಅವರು ಜೇಸಿಐ ಕಡಬ ಕದಂಬ ಮತ್ತು ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಕುಂತೂರು ಮಾರ್ ಇವಾನಿಯೋಸ್ ವಿದ್ಯಾಸಂಸ್ಥೆಯಲ್ಲಿ ನಡೆದ ಜೇಸಿ ಸಪ್ತಾಹ – 2019 ‘ಕದಂಬೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಮಾರ್ ಇವಾನಿಯೋಸ್ ಕಾಲೇಜಿನ ಸಂಚಾಲಕರಾದ ರೆ| ಫಾ| ಡಾ| ಎಲ್ದೋ ಪುತ್ತನ್ ಕಂಡತ್ತಿಲ್ ಭಾಗವಹಿಸಿ ಮಾತನಾಡಿದರು. ಜೇಸಿಐ ಕಡಬ ಕದಂಬ ಘಟಕಾಧ್ಯಕ್ಷ JFM.ರವಿಚಂದ್ರ ಪಡುಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜೇಸಿ ವಲಯ ತರಬೇತುದಾರರಾದ JCI Sen. ಅನ್ನಪೂರ್ಣ ಶರ್ಮ ‘ಮಹಿಳಾ ಸಬಲೀಕರಣ’ ದ ಬಗ್ಗೆ ತರಬೇತಿ ನೀಡಿದರು.

Also Read  ದಕ್ಷಿಣ ಕನ್ನಡ ಜಿ.ಪಂ. ಸಿಇಒ ಡಾ.ಸೆಲ್ವಮಣಿ ವರ್ಗಾವಣೆ

ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ (ರಿ.) ಅಧ್ಯಕ್ಷ JFM. ನಾಗರಾಜ್ ಎನ್.ಕೆ‌. ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು‌. ‌ವೇದಿಕೆಯಲ್ಲಿ ಸಂಸ್ಥೆಯ ಪ್ರಭಾರ ಪ್ರಾಂಶುಪಾಲರಾದ ಉಷಾ, ಜೇಸಿಐ ಕಡಬ ಕದಂಬ ಘಟಕದ ಕಾರ್ಯದರ್ಶಿ ಕಾಶೀನಾಥ್ ಗೋಗಟೆ, ಸಪ್ತಾಹ ನಿರ್ದೇಶಕರಾದ ಮೋಹನ್ ಕೋಡಿಂಬಾಳ ಉಪಸ್ಥಿತರಿದ್ದರು‌.

ಮುಂದಿನ ಏಳು ದಿನಗಳ ಕಾಲ ಕದಂಬೋತ್ಸವ ಕಾರ್ಯಕ್ರಮಗಳು ಕಡಬ ಪರಿಸರದ ವಿವಿಧೆಡೆ ನಡೆಯಲಿದ್ದು, ಸಮಾರೋಪದ ಅಂಗವಾಗಿ ಸೆಪ್ಟೆಂಬರ್ 15 ಭಾನುವಾರ ಸಂಜೆ ಕಡಬದ ಸೈಂಟ್ ಜೋಕಿಮ್ಸ್ ಚರ್ಚ್ ಸಭಾಂಗಣದಲ್ಲಿ ‘ಡ್ಯಾನ್ಸ್ ಬ್ಲಾಸ್ಟ್’ ಅದ್ಭುತ ನೃತ್ಯ ಪ್ರದರ್ಶನ ನಡೆಯಲಿದೆ.

Also Read  ನೆಲ್ಯಾಡಿ: ಹೊಟ್ಟೆ ನೋವಿನಿಂದ ಬಳಲಿ ಯುವತಿಯರಿಬ್ಬರು ಮೃತ್ಯು ➤ ಆತ್ಮಹತ್ಯೆ ಶಂಕೆ

Gems

error: Content is protected !!
Scroll to Top