ಕಾಣಿಯೂರು: ಇಂಗು ಗುಂಡಿಯಲ್ಲಿ ಶಾಲಾ ವಿದ್ಯಾರ್ಥಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಕಾಣಿಯೂರು. ಸೆ.06. ವಿದ್ಯಾರ್ಥಿಯ ಮೃತದೇಹವೊಂದು ಕಾಣಿಯೂರು ಪ್ರೌಢಶಾಲೆಗೆ ಸಮೀಪದ ಇಂಗುಗುಂಡಿಯಲ್ಲಿ ಗುರುವಾರ ರಾತ್ರಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿಿದೆ.

ಮೃತ ವಿದ್ಯಾರ್ಥಿಯನ್ನು ಚಾರ್ವಾಕ ಗ್ರಾಮದ ಬೊಮ್ಮೊಳಿಗೆ ನಿವಾಸಿ ಲಕ್ಷ್ಮಣ ಗೌಡ ಎಂಬವರ ಪುತ್ರ, ಕಾಣಿಯೂರು ಸರಕಾರಿ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಗೌತಮ್(16) ಎಂದು ಗುರುತಿಸಲಾಗಿದೆ. ಗುರುವಾರ ಶಿಕ್ಷಕರ ದಿನಾಚರಣೆಯಿದ್ದ ಹಿನ್ನೆಲೆಯಲ್ಲಿ ಅಪರಾಹ್ನ 3 ಗಂಟೆಯ ಹೊತ್ತಿಗೆ ಶಾಲೆ ಬಿಟ್ಟಿದ್ದರೂ ಗೌತಮ್ ಮನೆಗೆ ಹಿಂತಿರುಗಿರಲಿಲ್ಲ. ನುರಿತ ಈಜು ಪಟುವಾಗಿದ್ದ ಗೌತಮ್ ಸ್ನೇಹಿತರೊಂದಿಗೆ ಈಜಲು ತೆರಳಿರಬಹುದೆಂದು ಮನೆಯವರು ಅಂದುಕೊಂಡಿದ್ದರು.

ಆದರೆ ರಾತ್ರಿಯಾದರೂ ಮನೆಗೆ ಬಾರದೆ ಇದ್ದುದರಿಂದ ಸಂಬಂಧಿಕರು ಹಾಗೂ ಊರವರು ಹುಡುಕಾಟಕ್ಕಿಳಿದಾಗ ಶಾಲೆಯ ಸಮೀಪದಲ್ಲಿದ್ದ ಇಂಗುಗುಂಡಿಯ ಬಳಿ ಶಾಲಾ ಯುನಿಫಾರ್ಮ್ , ವಾಚ್ ಮತ್ತು ಚಪ್ಪಲಿ ಪತ್ತೆಯಾಗಿತ್ತು. ನಂತರ ಇಂಗು ಗುಂಡಿಯಲ್ಲಿ ಹುಡುಕಾಡಿದಾಗ ತಡರಾತ್ರಿ ವೇಳೆಗೆ ಗೌತಮ್ ನ ಮೃತದೇಹ ಪತ್ತೆಯಾಗಿದೆ.

Also Read  ಭಾರಿ ಮಳೆಗೆ ಮನೆ ಕುಸಿದ ಹಿನ್ನಲೆ ➤ ಸೂರು ಕಲ್ಪಿಸಿಕೊಂಡುವಂತೆ ಪಟ್ಟಣ ಪಂ. ಮತ್ತು ತಹಶೀಲ್ದಾರ್‌ ಗೆ ಮನವಿ

ಮೃತದೇಹದ ಎಡಗಣ್ಣಿಗೆ ಗಾಯವಾಗಿದ್ದು, ಘಟನಾ ಸ್ಥಳದಲ್ಲಿ ಎರಡು ಕೋಲುಗಳು ಪತ್ತೆಯಾಗಿವೆ. ಸ್ಥಳಕ್ಕೆ ಭೇಟಿ ನೀಡಿರುವ ಬೆಳ್ಳಾರೆ ಪೋಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

Gems

error: Content is protected !!
Scroll to Top