ಬೆಥನಿ ಐಟಿಐ ನೆಲ್ಯಾಡಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸಪ್ಟೆಂಬರ್.3.ಬೆಥನಿ ಐಟಿಐ ನೆಲ್ಯಾಡಿಯಲ್ಲಿ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ನಿರ್ಧೇಶಕರಾದ ರೆ|ಡಾ| ಫಾ| ವರ್ಗೀಸ್ ಕೈಪನಡುಕ್ಕ ಅವರು ಕಾರ್ಯಕ್ರಮ ಉದ್ಘಾಟಿಸಿ ಸಂಸ್ಥೆಗೆ ಸೇರಿದ ಎಲ್ಲಾ ವಿದ್ಯಾರ್ಥಿಗಳು ತರಬೇತಿಯನ್ನು ಉತ್ತಮವಾಗಿ ಪೂರೈಸಿ ಹೊರಬರುವಂತಾಗಲಿ ಎಂದು ಶುಭ ಹಾರೈಸಿದರು.ಸಂಸ್ಥೆಯ ಪ್ರಾಚಾರ್ಯರಾದ ಸಜಿ ಕೆ ತೋಮಸ್‍ರವರು ಮಾತನಾಡುತ್ತಾ ವಿದ್ಯಾರ್ಥಿಗಳು ನಿರಂತ ಪ್ರಯತ್ನದಿಂದ ಗುರಿ ತಲುಪಬಹುದು ಮತ್ತು ನಾವು ಮಾಡುವ ಕೆಲಸಕ್ಕೆ ಮಹತ್ವ ಕೊಡಬೇಕೆಂದು ಹೇಳಿ ಶುಭ ಹಾರೈಸಿದರು.

Also Read  ಹೊಸಗದ್ದೆ ತೋಟಗಾರಿಕೆ ಕ್ಷೇತ್ರ ➤ ಅಡಿಕೆ ಫಸಲು ವಿಲೇವಾರಿ

ವೇದಿಕೆಯಲ್ಲಿ ಉಪಸ್ಥಿತರಿದ್ದ ಅಧ್ಯಾಪಕ ವೃಂದದ ಕಾರ್ಯದರ್ಶಿಯಾದ ವಿನ್ಸೆಂಟ್ ಸಿ.ಎಸ್. ಇವರು ಸಂಸ್ಥೆಯ ಎಲ್ಲಾ ಸಿಬ್ಬಂದಿಗಳ ಕಿರು ಪರಿಚಯವನ್ನು ಮಾಡಿದರು. ವಿದ್ಯಾರ್ಥಿಗಳಾದ ಸುಧೀಶ್ ಶೆಟ್ಟಿ ಸ್ವಾಗತಿಸಿ ಯತೀಶ್ ವಂದಿಸಿದರು. ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು. ತದನಂತರ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದವು.

error: Content is protected !!
Scroll to Top