➤➤ Big Breaking News ಪುತ್ತೂರು: ಕೆರೆಗೆ ಉರುಳಿದ ಕಾರು ➤ ಒಂದೇ ಕುಟುಂಬದ ನಾಲ್ವರು ಮೃತ್ಯು

(ನ್ಯೂಸ್ ಕಡಬ) ‌newskadaba.com ಪುತ್ತೂರು, ಸೆ.02. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಕೆರೆಗೆ ಬಿದ್ದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ದಾರುಣ ಘಟನೆ ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಕಾವು ಎಂಬಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಮೃತರು ಮಡಿಕೇರಿಯ ಶುಂಠಿ ಕೊಪ್ಪ ನಿವಾಸಿಗಳೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಪತಿ – ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮಂಗಳೂರಿಗೆ ಆಗಮಿಸಿ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರಸ್ತೆ ಬದಿಯಲ್ಲಿರುವ ಈ ಕೆರೆಯು ತೀರಾ ಅಪಾಯಕಾರಿಯಾಗಿದ್ದು, ಇದನ್ನು ಮುಚ್ಚುವಂತೆ ಸಾರ್ವಜನಿಕರಿಂದ ಈ ಹಿಂದೆ ಒತ್ತಾಯ ಕೇಳಿ ಬಂದಿತ್ತಾದರೂ, ಮುಚ್ಚಿರಲಿಲ್ಲ. ಸ್ಥಳಕ್ಕೆ ಸಂಪ್ಯ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ.

Also Read  ಸುಳ್ಯ: ರಸ್ತೆಯ ವಿಚಾರದಲ್ಲಿ ವಿವಾದ- ಪೊಲೀಸ್ ಎಂಟ್ರಿ ➤ ತನಿಖೆಯ ವೇಳೆ ಸಾಗುವಾನಿ ಮರದ ದಿಮ್ಮಿ ಪತ್ತೆ

 

Gems

error: Content is protected !!
Scroll to Top