ಬಲ್ಯ: ಕೆರೆಗೆ ಬಿದ್ದು ಯುವತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಸೆ.01. ಕಳೆದ 20 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಯುವತಿಯೋರ್ವಳ ಮೃತದೇಹವು ಮನೆ ಸಮೀಪದ ಕೆರೆಯಲ್ಲಿ ಭಾನುವಾರದಂದು ಪತ್ತೆಯಾಗಿದೆ.

Gems

ಬಲ್ಯ ಗ್ರಾಮದ ಪನ್ಯಾಡಿ ಲಿಂಗಪ್ಪ ಗೌಡರ ಪುತ್ರಿ ಕು| ಸುಮಿತ್ರಾ(41ವ.) ಮೃತಪಟ್ಟವರು. ಇವರು ಸುಮಾರು 20 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಇವರು ಶನಿವಾರದಂದು ಹುಲ್ಲು ತರಲೆಂದು ಹೋಗಿದ್ದು ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಇವರನ್ನು ಮನೆಯವರು ಹುಡುಕಾಡತೊಡಗಿದಾಗ ಭಾನುವಾರದಂದು ಮನೆಯ ಸಮೀಪದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಮೃತರ ಸಹೋದರ ಬಾಲಕೃಷ್ಣ ಗೌಡ ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ.

Also Read  ಭೂಮಿ ಕೇಂದ್ರದಲ್ಲಿ ಪಹಣಿಗಳ ಡಿಜಿಟಲ್ ಸೈನಿಂಗ್ ಪ್ರಕ್ರಿಯೆಯ ಹಿನ್ನೆಲೆ ➤ ಎಪ್ರಿಲ್ 10 ರ ವರೆಗೆ ಆನ್‌ಲೈನ್‌ನಲ್ಲಿ ಪಹಣಿ ಪಡೆಯುವಂತೆ ಕಡಬ ತಹಶೀಲ್ದಾರ್ ಪ್ರಕಟಣೆ

error: Content is protected !!
Scroll to Top