ನಾಳೆ (ಸೆ.01) ಗುಂಡ್ಯ – ಸುಬ್ರಹ್ಮಣ್ಯ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ➤ ಕಾಪಾರು ರೈಲ್ವೇ ಮೇಲ್ಸೇತುವೆಯ ಕೆಳಗಿನ ಮೋರಿ ತುರ್ತು ದುರಸ್ತಿಯ ಹಿನ್ನೆಲೆ

(ನ್ಯೂಸ್ ಕಡಬ) newskadaba.com ಕಡಬ, ಆ.31. ಗುಂಡ್ಯ – ಸುಬ್ರಹ್ಮಣ್ಯ ರಸ್ತೆಯ ಕಾಪಾರು ಎಂಬಲ್ಲಿ ರೈಲ್ವೆ ಸೇತುವೆಯ ಕೆಳಭಾಗದಲ್ಲಿ ಮೋರಿ ದುರಸ್ತಿ ಕಾಮಗಾರಿಯನ್ನು ತುರ್ತಾಗಿ ಕೈಗೊಳ್ಳಬೇಕಾಗಿ ರುವುದರಿಂದ ಸದರಿ ರಸ್ತೆಯಲ್ಲಿ ಸೆಪ್ಟೆಂಬರ್ 01 ಭಾನುವಾರದಂದು ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಎಲ್ಲಾ ವಾಹನಗಳು ಬದಲಿ ರಸ್ತೆಯಾದ ಸುಬ್ರಹ್ಮಣ್ಯ – ಮರ್ಧಾಳ – ಇಚಿಲಂಪಾಡಿ – ಧರ್ಮಸ್ಥಳ ರಸ್ತೆಯಲ್ಲಿ ಸಂಚರಿಸುವ ಮೂಲಕ ಸಹಕರಿಸುವಂತೆ ಪುತ್ತೂರು ಲೋಕೋಪಯೋಗಿ ಇಲಾಖೆಯ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top