ಕಡ್ಯ-ಕೊಣಾಜೆ ➤ ರಮೇಶ್ ಆಚಾರಿ ಅವರಿಗೆ ಸಮ್ಮಾನ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆಗಸ್ಟ್.31.ಕಡ್ಯ-ಕೊಣಾಜೆ ಗ್ರಾ.ಪಂ.ನಲ್ಲಿ ಕಳೆದ 4 ವರ್ಷಗಳಿಂದ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಇತ್ತೀಚೆಗೆ ವರ್ಗಾವಣೆಗೊಂಡ ರಮೇಶ್ ಆಚಾರಿ ಅವರನ್ನು ಗ್ರಾ.ಪಂ. ವತಿಯಿಂದ ಶುಕ್ರವಾರ ಸಮ್ಮಾನಿಸಲಾಯಿತು.


ಕಡ್ಯ ವಾಸುದೇವ ಭಟ್ ಹಾಗೂ ಅತಿಥಿಗಳು ರಮೇಶ್ ಅಚಾರಿ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸಮ್ಮಾನಿಸಿ, ಗೌರವಿಸಿದರು. ವಾಸುದೇವ ಭಟ್ ಮಾತನಾಡಿ, ಕಡ್ಯ-ಕೊಣಾಜೆ ಗ್ರಾ.ಪಂ. ನೂತನವಾಗಿ ಪ್ರಾರಂಭಗೊಂಡಂದಿನಿಂದ ಸುಮಾರು 4 ವರ್ಷಗಳ ಕಾಲ ಪಿಡಿಒ ಆಗಿ ಕರ್ತವ್ಯ ನಿರ್ವಹಿಸಿ, ಗ್ರಾಮಸ್ಥರೊಂದಿಗೆ ಉತ್ತಮ ರೀತಿಯಲ್ಲಿ ಸಹಕರಿಸಿದ್ದಾರೆ ಇವರ ಕೆಲಸ ಕಾರ್ಯಗಳು ಇತರರಿಗೆ ಮಾದರಿ ಎಂದರು. ಸಮ್ಮಾನ ಸ್ವೀಕರಿಸಿ ಮಾತನಾಡಿದ ರಮೇಶ್ ಆಚಾರಿ, ಗ್ರಾಮಸ್ಥರ, ಆಡಳಿತ ಮಂಡಳಿಯವರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಶಿವಪ್ಪ ಗೌಡ ಸಂದರ್ಭೋಚಿತವಾಗಿ ಮಾತನಾಡಿದರು.

Also Read  ನಾಳೆಯಿಂದ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿ ಆರಂಭ

ವೇದಿಕೆಯಲ್ಲಿ ತಾ.ಪಂ.ಸದಸ್ಯೆ ಪಿ.ವೈ. ಕುಸುಮಾ, ಗ್ರಾ.ಪಂ.ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷ ಯಶೋಧರ ಗೌಡ, ಸದಸ್ಯರಾದ ಪೊಡಿಯ ಗೌಡ, ಪುಷ್ಪಾವತಿ, ಚಂದ್ರಾವತಿ, ತಾಲೂಕು ಅಕ್ಷರ ದಾಸೋಹ ನಿರ್ದೇಶಕ ರಮೇಶ್ ಕುಮಾರ್ ಪಿ., ಶಿರಾಡಿ ಪ್ರಾ.ಆ.ಕೇ.ವೈದ್ಯಾಧಿಕಾರಿ ಡಾ.ಹರ್ಷಿತಾ, ಹಿ.ಆ.ಸ. ಮರಿಯಮ್ಮ, ಮೆಸ್ಕಾಂನ ಮನೋಜ್, ಮುಖ್ಯ ಶಿಕ್ಷಕ ರಾಮಕೃಷ್ಣ ಕೆ, ಮೇಲ್ವಿಚಾರಕಿ ಲಲಿತಾ, ವಲಯ ಅರಣ್ಯಾಧಿಕಾರಿ ಪ್ರಕಾಶ್, ವಿ.ಎ. ಸುನಿಲ್, ರವೀಂದ್ರ ಆರಿಗ, ಪುನೀತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ. ಸಿಬ್ಬಂದಿ ಸತೀಶ್ ಕೆ. ಸಮ್ಮಾನಿತರ ಪರಿಚಯ ಓದಿದರು. ಪಂ. ಅಭಿವೃದ್ಧಿ ಅಧಿಕಾರಿ ಪದ್ಮನಾಭ ಗೌಡ ಪಿ. ಸ್ವಾಗತಿಸಿ, ವಂದಿಸಿದರು.

Also Read  ಈ ಊರಲ್ಲಿ ಹಾವು ಇಲ್ಲ ಅಂದ್ರೆ ಮದುವೆನೇ ಆಗಲ್ಲ - ಏನಿದು ವಿಚಿತ್ರ…ಇಲ್ಲಿದೆ ಸ್ಟೋರಿ

error: Content is protected !!
Scroll to Top