ಐಡಿಯಲ್ ಫ್ರೆಂಡ್ಸ್ ಕ್ಲಬ್ ಕೇಪು ಕುಟ್ರುಪ್ಪಾಡಿ ► ಆಗಸ್ಟ್ 20ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕ್ರೀಡಾಕೂಟ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.15. ಐಡಿಯಲ್ ಫ್ರೆಂಡ್ಸ್ ಕ್ಲಬ್ ಕೇಪು ಕುಟ್ರುಪ್ಪಾಡಿ ವತಿಯಿಂದ 11ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕ್ರೀಡಾಕೂಟವು ಆಗಸ್ಟ್ 20, ಆದಿತ್ಯವಾರದಂದು ಕೇಪು – ಕುಟ್ರುಪ್ಪಾಡಿ ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯಲ್ಲಿ ನಡೆಯಲಿದೆ. ಬೆಳಿಗ್ಗೆ 9.45ರಿಂದ ಸಭಾ ಕಾರ್ಯಕ್ರಮ ಆರಂಭವಾಗಲಿದ್ದು, ಮಧ್ಯಾಹ್ನ 12.30ರಿಂದ ಚಿದಾನಂದ ಬೆಂಗಳುರು ಮತ್ತು ತಂಡದವರಿಂದ ‘ಕರೊಕೇ’ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಮೊಸರು ಕುಡಿಕೆ, ಹಗ್ಗ ಜಗ್ಗಾಟ, ಮಡಿಕೆ ಒಡೆಯುವುದು, ಕೃಷ್ಣ ವೇಷ ಸೇರಿದಂತೆ ವಿವಿಧ ರೀತಿಯ ಆಟೋಟಗಳು ನಡೆಯಲಿದ್ದು, ಸ್ಪಧರ್ೆಯಲ್ಲಿ ಭಾಗವಹಿಸುವವರು ಬೆಳಿಗ್ಗೆ 10 ಗಂಟೆಯ ಒಳಗಾಗಿ ಹೆಸರನ್ನು ನೋಂದಾಯಿಸಬೇಕೆಂದು ಐಡಿಯಲ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಸಸಿಹಿತ್ಲು ಶಾಂಭವಿ ನದಿ ತೀರದಲ್ಲಿ ಅಪರಿಚಿತ ಶವ ಪತ್ತೆ

 

error: Content is protected !!
Scroll to Top