ಸಮಾಜ ಕಲ್ಯಾಣ ಇಲಾಖಾ ವತಿಯಿಂದ ➤ ಹಾಸ್ಟೆಲ್ ಗೆ ಬಾಡಿಗೆ ಕಟ್ಟಡ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.20.ಸಮಾಜ ಕಲ್ಯಾಣ ಇಲಾಖಾ ವತಿಯಿಂದ ಹಾಸ್ಟೆಲ್ ಗೆ ಬಾಡಿಗೆ ಕಟ್ಟಡ ನೀಡಲು ಇಚ್ಛಿಸುವರಿಂದ ಅರ್ಜಿ ಆಹ್ವಾನಿಸಲಾಗಿದೆ.

ನಡೆಸಲ್ಪಡುತ್ತಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿ ನಿಲಯ ಕೊಡಿಯಾಲ್‍ಬೈಲ್ ( 125 ವಿದ್ಯಾರ್ಥಿಗಳ ಸಾಮಥ್ರ್ಯ) ಹಾಗೂ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿ ನಿಲಯ ಕೊಡಿಯಾಲ್‍ಬೈಲ್ ಮಂಗಳೂರು ( 119 ವಿದ್ಯಾರ್ಥಿಗಳ ಸಾಮಥ್ರ್ಯ) ಇವುಗಳನ್ನು ನಡೆಸಲು ಮಂಗಳೂರು ನಗರ ವ್ಯಾಪ್ತಿಯೊಳಗೆ ಬಾಡಿಗೆಗೆ ಕಟ್ಟಡ ಬೇಕಾಗಿರುತ್ತದೆ. ಕಟ್ಟಡವನ್ನು ಬಾಡಿಗೆಗೆ ನೀಡಲು ಇಚ್ಛಿಸುವವರು ಸಹಾಯಕ ನಿರ್ದೇಶಕರು ಗ್ರೇಡ್-1 ಸಮಾಜ ಕಲ್ಯಾಣ ಇಲಾಖೆ ರಸಿಕ್ ಚೇಂಬರ್ 3ನೇ ಮಹಡಿ, ಸೆಂಟ್ರಲ್ ಮಾರ್ಕೆಟ್ ರಸ್ತೆ, ಮಂಗಳೂರು ದೂರವಾಣಿ ಸಂಖ್ಯೆ-0824-2441269 ಇಲ್ಲಿಗೆ ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Also Read  ವ್ಯಕ್ತಿ ಕಾಣೆಯಾಗಿದ್ದಾರೆ

error: Content is protected !!
Scroll to Top