ಪ್ರಧಾನಿ ಮೋದಿ, ಯಡಿಯೂರಪ್ಪ, ಆರೆಸ್ಸೆಸ್ ವಿರುದ್ಧ ಅವಹೇಳನಕಾರಿ ಸಂದೇಶ ➤ ಕಡಬದ ಸರ್ವೇಯರ್ ವಿರುದ್ಧ ಪೊಲೀಸ್ ದೂರು

(ನ್ಯೂಸ್ ಕಡಬ) newskadaba.com ಕಡಬ, ಆ.17. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಆರೆಸ್ಸೆಸ್ ವಿರುದ್ದ ಅವಹೇಳನಕಾರಿಯಾಗಿ ಸಂದೇಶ ರವಾನಿಸಿದ ಅರೋಪದಡಿ ಕಡಬ ತಾಲೂಕು ಭೂಮಾಪನ ಇಲಾಖೆಯ ಸಿಬ್ಬಂದಿ ಮಹೇಶ್ ಎಂಬಾತನನ್ನು ಕಡಬ ಪೊಲೀಸರು ಶುಕ್ರವಾರದಂದು ವಶಕ್ಕೆ ಪಡೆದುಕೊಂಡಿದ್ದಾರೆ.

ಮಹೇಶ್ ಕೀಳು ಮಟ್ಟದ ಪದಗಳನ್ನು ಬಳಕೆ ಮಾಡಿ ಅವಹೇಳನಕಾರಿ ಸಂದೇಶಗಳನ್ನು ತನ್ನ ವಾಟ್ಸ್ಅಪ್ ಸ್ಟೇಟಸ್ ಹಾಕಿಕೊಂಡಿದ್ದ ಹಿನ್ನೆಲೆಯಲ್ಲಿ ಕಡಬದ ಹಿಂದೂ ಸಂಘಟನೆಯ ಮುಖಂಡರಾದ ವೆಂಕಟ್ರಮಣ ಕೋಡಿಂಬಾಳ ಎಂಬವರು ಕಡಬ ಪೊಲೀಸ್ ಠಾಣೆಗೆ ಮಹೇಶ್ ವಿರುದ್ಧ ದೂರು ನೀಡಿದ್ದರು.

ಮಹೇಶ್ ಕಳೆದ ಕೆಲ ಸಮಯದಿಂದ ತಾನು ಓರ್ವ ಸರಕಾರಿ ಉದ್ಯೋಗಿ ಎನ್ನುವುದನ್ನು ಕೂಡ ಮರೆತು ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ, ಆರೆಸ್ಸೆಸ್ ವಿರುದ್ಧ ಅವಹೇಳನಕಾರಿ ಸಂದೇಶಗಳನ್ನು ತನ್ನ ಫೇಸ್‍ಬುಕ್ ಖಾತೆ ಹಾಗೂ ವಾಟ್ಸ್ಅಪ್ ಸ್ಟೇಟಸ್ ಗಳಲ್ಲಿ ಹಾಕಿಕೊಳ್ಳುತ್ತಿದ್ದು, ಮಹೇಶ್‍ನನ್ನು ಸೇವೆಯಿಂದ ವಜಾಗೊಳಿಸಿ ಆತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಿಂದೂ ಮುಖಂಡರು ಆಗ್ರಹಿಸಿದ್ದರು. ತಪ್ಪಿದಲ್ಲಿ ಕಡಬ ತಾಲೂಕು ಬಂದ್‍ಗೆ ಕರೆ ನೀಡಿ ಉಗ್ರ ರೀತಿಯ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದರು. ಈ ಹಿನ್ನಲೆಯಲ್ಲಿ ಕಡಬ ಪೊಲೀಸರು ಭೂಮಾಪನ ಇಲಾಖಾ ಸಿಬ್ಬಂದಿ ಮಹೇಶ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Also Read  ಮದ್ಯ ಸರಬರಾಜು ಮಾಡುತ್ತಿದ್ದ ವಾಹನ ಪಲ್ಟಿ..!!!

error: Content is protected !!
Scroll to Top