ಆದಿವಾಸಿ ಹಾಕಿ ಆಟಗಾರ್ತಿಯರ ಶವಗಳು ಮರದಲ್ಲಿ ನೇತಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ರಾಂಚಿ, ಆಗಸ್ಟ್.14.ಇಬ್ಬರು ಆದಿವಾಸಿ ಹಾಕಿ ಆಟಗಾರ್ತಿಯರ ಶವಗಳು ಮರದಲ್ಲಿ ನೇತಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿವೆ.ಯುವತಿಯರ ಮನೆಯವರು ಇದು ಕೊಲೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ಮೃತರಾದ ಸುನಂದಿನಿ ಬಾಗೆ (23) ಮತ್ತು ಶ್ರದ್ಧಾ ಸೊರೆಂಗ್‌ (18) ಎಂಬವರು ಝಾರ್ಖಂಡ್‌ನ‌ ಸಿಮ್ಡೇಗ ಜಿಲ್ಲೆಯಲ್ಲಿ ನೆಲೆಸಿದ್ದರು.ಈ ಇಬ್ಬರ ಮೃತರ ಮರಣೋತ್ತರ ಪರೀಕ್ಷೆ ಬಳಿಕ ಶವಗಳ ಅಂತ್ಯಸಂಸ್ಕಾರ ಮಾಡಲಾಗಿದೆ.ಶ್ರದ್ಧಾ ಸಿಮ್ಡೇಗ ಜಿಲ್ಲೆಯ ಪತ್ರಟೋಲಿಯವರಾಗಿದ್ದು ಒಡಿಶಾದ ಸುಂದರ್‌ಗ್ರಹ ಜಿಲ್ಲೆಯ ಬಿರ್ಮಿತ್ರಪುರ ಎಂಬಲ್ಲಿ ಕಲಿಯುತ್ತಿದ್ದರು.

ಸುನಂದಿನಿ ಸುಂದರ್‌ಗ್ರಹದ ಗಿಪಿಟೋಲ ಲಾಚ್ರ ಎಂಬ ಹಳ್ಳಿಯವರಾಗಿದ್ದು, ರೂರ್ಕೆಲಾದ ಹಾಕಿ ತರಬೇತಿ ಕೇಂದ್ರದಲ್ಲಿ ಪರಿಚಿತರಾದ ಬಳಿಕ ಇವರಿಬ್ಬರು ಸ್ನೇಹಿತೆಯರಾಗಿದ್ದರು. ಆಗಾಗ ಅವರು ಪರಸ್ಪರರ ಮನೆಗಳಿಗೆ ಹೋಗುವುದಿತ್ತು. ಸಾವಿನ ಕಾರಣ ಏನು ಎನ್ನುವುದು ಇನ್ನೂ ತಿಳಿದುಬಂದಿಲ್ಲ.

Also Read  ಬೆಂಕಿ ಅವಘಡ… ➤ ಐವರು ಮಕ್ಕಳು ಮತ್ತು ಪೋಷಕರು ಮೃತ್ಯು

error: Content is protected !!
Scroll to Top