ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಾಲಯದ ನೂತನ ಆಡಳಿತ ಅಧಿಕಾರಿಯಾಗಿ ➤ ಕಡಬ ಉಪ ತಾಶೀಲ್ದಾರ್ ನವ್ಯಾ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಆಲಂಕಾರು, ಆಗಸ್ಟ್.14.ಧಾರ್ಮಿಕ ದತ್ತಿ ಇಲಾಖೆಯ ಆಧೀನಕ್ಕೊಳಪಟ್ಟ ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಾಲಯದ ನೂತನ ಆಡಳಿತ ಅಧಿಕಾರಿಯಾಗಿ ಕಡಬ ಉಪ ತಾಶೀಲ್ದಾರ್ ನವ್ಯಾ ಅಧಿಕಾರ ಸ್ವೀರಿಸಿದರು.


ಇದೇ ವೇಳೆ ದೇವಾಲಯದ ನಿರ್ಗರ್ಮಿತ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕಮಲಾಕ್ಷ ರೈ ಪರಾರಿಗುತ್ತು ದೇವಾಲಯದ ದಾಖಲೆ ಪತ್ರಗಳನ್ನು ನೂತನಾಡಳಿತ ಅಧಿಕಾರಿಗೆ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಆಲಂಕಾರು ಗ್ರಾಮ ಕರಣಿಕ ರಮೇಶ್, ಪೆರಾಬೆ ಗ್ರಾಮ ಕರಣಿಕೆ ದೇವಕಿ, ಭೂಮಿ ಕೇಂದ್ರದ ಸಿಬ್ಬಂದಿ ರಕ್ಷಾ, ಸ್ಥಳೀಯ ನಿವಾಸಿ ಯಾದವೇಂದ್ರ ರಾವ್, ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಉಮೇಶ್ ದೇವಾಡಿಗ, ಕರಿಯ ಗಾಣಂತಿ, ಗುರುಪ್ರಸಾದ್, ಮೀನಾಕ್ಷಿ ಹಳೆನೇರಂಕಿ, ದೇವಾಲಯದ ಪ್ರಧಾನ ಅರ್ಚಕ ಹರಿಪ್ರಸಾದ್, ಮಂಜುನಾಥ, ಸಿಬ್ಬಂದಿ ಸಂದೀಪ್ ಮೊದಲಾದವರು ಉಪಸ್ಥಿತರಿದ್ದರು.

Also Read  ಬಾಡಿಗೆ ಮನೆಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಗೆ- ಪೊಲೀಸ್ ದಾಳಿ ➤ ನಾಲ್ವರು ಅಂದರ್

error: Content is protected !!
Scroll to Top