ಭಾರತಕ್ಕೆ ಗೆಲುವಿನ ಪುಳಕ ಹುಟ್ಟಿಸಿದ ವಿರಾಟ್ ಕೊಹ್ಲಿಯ ಭರ್ಜರಿ ಶತಕ

(ನ್ಯೂಸ್ ಕಡಬ) newskadaba.com ಪೋರ್ಟ್‌ ಆಫ್‌ ಸ್ಪೇನ್, ಆಗಸ್ಟ್.12.ವಿಂಡೀಸ್‌ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಭಾರತ 59 ರನ್‌ ಅಂತರದಿಂದ ಗೆದ್ದುಕೊಂಡಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ನಿಗಧಿತ 50 ಓವ್‌ ಗಳಲ್ಲಿ ಏಳು ವಿಕೆಟ್‌ ನಷ್ಟಕ್ಕೆ 279 ರನ್‌ ಗಳಿಸಿದರೆ, ಮಳೆಯ ಕಾರಣದಿಂದ 46 ಓವರ್‌ ಗೆ 270 ರನ್‌ ಗಳಿಸುವ ಗುರಿ ಪಡೆದ ವಿಂಡೀಸ್‌ 210 ರನ್‌ ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಪಂದ್ಯ ಕೈಚೆಲ್ಲಿತು.ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿದ ಭಾರತಕ್ಕೆ ಮತ್ತೆ ಆರಂಭಿಕರು ಕೈಕೊಟ್ಟರಾದರೂ,ರನ್‌ ಮಶಿನ್‌ ವಿರಾಟ್‌ ಕೊಹ್ಲಿಯ ಭರ್ಜರಿ ಶತಕ, ಶ್ರೇಯಸ್‌ ಅಯ್ಯರ್‌ ಜವಾಬ್ಧಾರುಯುತ ಅರ್ಧ ಶತಕ, ಭುವನೇಶ್ವರ್‌ ಕುಮಾರ್‌ ಮಿಂಚಿನ ಬೌಲಿಂಗ್‌ ಸಾಧನೆಯಿಂದ ಈ ಪಂದ್ಯ ಗೆಲ್ಲಲು ಸಾಧ್ಯವಾಯಿತು.

Also Read  ಬಾಂಗ್ಲಾ ವಿರುದ್ಧ ಮೊದಲ ಟೆಸ್ಟ್- 376ರನ್ ಗಳಿಗೆ ಆಲೌಟ್ ಆದ ಭಾರತ

ಕೇವಲ ಎರಡು ರನ್‌ ಗಳಿಸಿದ ಶಿಖರ್‌ ಧವನ್‌ ಮೊದಲ ಓವರ್‌ ನಲ್ಲೇ ಪೆವಿಲಿಯನ್‌ ಗೆ ಮರಳಿದರು. ಕ್ವೀನ್ಸ್‌ ಪಾರ್ಕ್‌ ಓವಲ್‌ ನಲ್ಲಿ ಬ್ಯಾಟಿಂಗ್‌ ನಡೆಸಲು ಪರದಾಡಿದ ರೋಹಿತ್‌ 34 ಎಸೆತ ಎದುರಿಸಿ 18 ರನ್‌ ಗಳಿಸಿದ್ದಾಗ ದೊಡ್ಡ ಹೊಡೆತಕ್ಕೆ ಕೈ ಹಾಕಿ ಪೂರನ್‌ ಗೆ ಕ್ಯಾಚ್‌ ನೀಡಿ ಔಟಾದರು. ನಂತರ ಬಂದ ಪಂತ್‌ ಕೂಡಾ 20 ರನ್‌ ಗೆ ವಿಕೆಟ್‌ ಒಪ್ಪಿಸಿದರು.ಆದರೆ ನಾಲ್ಕನೇ ವಿಕೆಟ್‌ ಗೆ ಕೊಹ್ಲಿ ಜೊತೆಯಾದ ಶ್ರೇಯಸ್‌ ಅಯ್ಯರ್‌ ನಿಧಾನವಾಗಿ ತಂಡದ ಮೊತ್ತ ಹೆಚ್ಚಿಸಿದರು. ಕೊಹ್ಲಿ- ಅಯ್ಯರ್‌ ಜೋಡಿ 125 ರನ್‌ ಜೊತೆಯಾಟ ನಡೆಸಿದರು.

ನಾಯಕ ವಿರಾಟ್‌ ತಾಳ್ಮೆಯಿಂದ ಇನ್ನಿಂಗ್ಸ್‌ ಕಟ್ಟಿ ತಮ್ಮ ಏಕದಿನ ಬಾಳ್ವೆಯ 42ನೇ ಶತಕ ಬಾರಿಸಿದರು. 125 ಎಸೆತ ಎದುರಿಸಿದ ವಿರಾಟ್ 14 ಬೌಂಡರಿ ಮತ್ತು ಒಂದು ಸಿಕ್ಸರ್‌ ನೆರವಿನಿಂದ 120 ರನ್‌ ಗಳಿಸಿ ಬ್ರಾಥ್‌ ವೇಟ್‌ ಗೆ ವಿಕೆಟ್‌ ಒಪ್ಪಿಸಿದರು.ಭಾರತದ ಪರ ಭುವಿ ನಾಲ್ಕು ವಿಕೆಟ್‌, ಶಮಿ ಮತ್ತು ಕುಲದೀಪ್‌ ತಲಾ ಎರಡು ವಿಕೆಟ್‌ ಪಡೆದರು. ಭರ್ಜರಿ ಶತಕ ಬಾರಿಸಿದ ವಿರಾಟ್‌ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Also Read  ರಣಜಿ ಟ್ರೋಫಿ ಟೂರ್ನಿಗೆ ರಾಹುಲ್ ದ್ರಾವಿಡ್ ಪುತ್ರ ಸಮಿತ್ ಗೆ ಸ್ಥಾನ

 

error: Content is protected !!
Scroll to Top