ಐತ್ತೂರು ಗ್ರಾಮ ಪಂಚಾಯತ್‍ನಲ್ಲಿ 71ನೇ ವರ್ಷದ ಸ್ವಾತಂತ್ರ್ಯೋತ್ಸವ



(ನ್ಯೂಸ್ ಕಡಬ) newskadaba.com ಕಡಬ, ಆ.15. ಐತ್ತೂರು ಗ್ರಾಮ ಪಂಚಾಯತ್‍ನಲ್ಲಿ 71ನೇ ವರ್ಷದ ಸ್ವಾತಂತ್ರ್ಯೋತ್ಸವದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್.ಕೆ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೃತ ಸೈನಿಕರಾದ ಪಿ.ಟಿ.ಪಿಲಿಫ್ ತುಂಬ್ಯ, ರಾಜೇಶ್ ಬಸ್ತಿ ಕೊಡೆಂಕಿರಿ, ವಾಡ್ಯಪ್ಪ ಗೌಡ ಬೊಮ್ಮನಗದ್ದೆ, ಸುಬ್ರಾಯ ಬೈಪಡಿತ್ತಾಯ, ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಪಿ.ಪಿ.ಮತ್ಯಾಸ್, ಶ್ರೀಧರ ಗೌಡ, ಧರ್ಮಪಾಲ ಕೆ., ಗೋಮತಿ, ಜಯಲಕ್ಷ್ಮಿ, ಗ್ರಾಮಸ್ಥರು ಉಪಸ್ಥಿತರಿದ್ದರು. ದೇವಿಕ ಪ್ರಾರ್ಥನೆಯನ್ನು ಹಾಡಿದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ವಿಲ್ಷ್ರೆಡ್ ಲಾರೆನ್ಸ್ ರೊಡ್ರಿಗಸ್ ಸ್ವಾಗತಿಸಿ ನವ ಭಾರತ ಸಂಕಲ್ಪ ಘೋಷಣೆಯನ್ನು ಮಾಡಿ ಶುಭಾಶಯ ಕೋರಿದರು.





error: Content is protected !!
Scroll to Top