ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ➤ ಆಯುಷ್ ಶಿಬಿರ -ಡೆಂಗ್ಯೂ ಜಾಗೃತಿ ಅಭಿಯಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.9.ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ಆಯುಷ್ ಶಿಬಿರ -ಡೆಂಗ್ಯೂ ಜಾಗೃತಿ ಅಭಿಯಾನವನ್ನು ನಡೆಸಲಾಗಿತ್ತು.

ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಸಜಿಪಮೂಡ ಇಲ್ಲಿನ ವೈದ್ಯಾಧಿಕಾರಿ ಡಾ. ಕೆ.ಎ. ಮಣಿಕರ್ಣಿಕ ಇವರ ನೇತೃತ್ವದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುಂಪಿನ ಸದಸ್ಯರ ಸಹಯೋಗದೊಂದಿಗೆ ಸಜಿಪಮೂಡದ ಶ್ರೀಗುರು ಕಲ್ಯಾಣ ಮಂಟಪದಲ್ಲಿ ಉಚಿತ ಆಯುಷ್ ಚಿಕಿತ್ಸಾ ಶಿಬಿರ ಹಾಗೂ ಡೆಂಗ್ಯೂ ಜಾಗೃತಿ ಅಭಿಯಾನದಡಿಯಲ್ಲಿ ಡೆಂಗ್ಯೂ ಖಾಯಿಲೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಾಯಿತು.ಡಾ. ಮಣಿಕರ್ಣಿಕ ಅವರೊಂದಿಗೆ ವೈದ್ಯಾಧಿಕಾರಿ, ವಾಮದಪದವು ಡಾ. ವಸುಧಾ, ಆಯುಷ್ ಸಿಬ್ಬಂದಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿ, ಮಾಹಿತಿ ನೀಡಿದರು.

Also Read  ಅಸಂಘಟಿತ ಕಾರ್ಮಿಕರ ಸೌಲಭ್ಯ- ಹೆಸರು ನೋಂದಾಯಿಸಲು ಸೂಚನೆ

error: Content is protected !!
Scroll to Top