ಮುಳುಗಡೆಯ ಭೀತಿಯಲ್ಲಿ ಹೊಸ್ಮಠ ಹೊಸ ಸೇತುವೆ ➤ ನೂತನ ಸೇತುವೆಗೆ ಹೊಡೆಯುತ್ತಿರುವ ನೆರೆ ನೀರು ➤ ಸ್ಥಳಕ್ಕೆ ಜಮಾಯಿಸುತ್ತಿರುವ ಸಾರ್ವಜನಿಕರು

(ನ್ಯೂಸ್ ಕಡಬ) newskadaba.com ಕಡಬ, ಆ.08. ಮುಳುಗು ಸೇತುವೆಯೆಂದೇ ಕುಖ್ಯಾತಿ ಪಡೆದಿದ್ದ ಹೊಸ್ಮಠ ಸೇತುವೆಗೆ ಪರ್ಯಾಯವಾಗಿ ಹೊಸ ಸೇತುವೆ ನಿರ್ಮಿಸಿ ಸಂಚಾರಕ್ಕೆ ಮುಕ್ತಗೊಳಿಸಿದ್ದರೂ, ಇದೀಗ ನೆರೆ ನೀರಿನ ಹೆಚ್ಚಳದಿಂದಾಗಿ ಹೊಸ ಸೇತುವೆಯೂ ಮುಳುಗಡೆಯ ಭೀತಿಯನ್ನು ಎದುರಿಸುತ್ತಿದೆ.

ಹೊಸ ಸೇತುವೆಯ ಅಡಿಭಾಗಕ್ಕೆ ನೀರು ಹೊಡೆಯುತ್ತಿದ್ದು, ಹೊಸ ಸೇತುವೆಯ ಮೇಲೆ ಸಂಚರಿಸಲು ಸಾರ್ವಜನಿಕರು ಭಯಪಡುತ್ತಿದ್ದಾರೆ. ನೀರಿನ ಹರಿವು ಹೆಚ್ಚಾಗುತ್ತಿದ್ದು, ಹರಿವಿನ ಮಟ್ಟವನ್ನು ವೀಕ್ಷಿಸಲು ಸಾರ್ವಜನಿಕರು ಸ್ಥಳಕ್ಕೆ ಜಮಾಯಿಸುತ್ತಿದ್ದಾರೆ.

Scroll to Top