(ನ್ಯೂಸ್ ಕಡಬ) newskadaba.com ಕೇಪು ಕುಟ್ರುಪಾಡಿ , ಆಗಸ್ಟ್.8.ಕುಟ್ರುಪಾಡಿ ಗ್ರಾಮದ ಕೇಪು ಶ್ರೀ ಲಕ್ಷೀ ಜನಾರ್ದನ ದೇವಸ್ಥಾನದ ಬಳಿ ಕೋಟಿ ವೃಕ್ಷ ಆಂದೋಲನ ನಡೆಯಿತು.
ಕಡಬ ಸರಸ್ವತಿ ವಿದ್ಯಾಲಯದ ಸಹಯೋಗದೊಂದಿಗೆ ನಡೆದ ಕೋಟಿ ವೃಕ್ಷ ಆಂದೋಲನವನ್ನು ಸುರೇಶ್ ದೇಂತಾರು ಗಿಡ ನೆಡುವ ಮೂಲಕ ಚಾಲನೆ ನೀಡಿ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರಿಗೂ ಸಸಿಗಳು ವಿತರಿಸಲಾಯಿತು. ಕೇಪು ಶ್ರೀ ಲಕ್ಷೀ ಜನಾರ್ದನ ದೇವಸ್ಥಾನದ ವಠಾರ ಹಾಗೂ ಸುತ್ತಮುತ್ತಲಿನಲ್ಲಿ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಕುಟ್ರುಪಾಡಿ ಗ್ರಾ.ಪಂ. ಸದಸ್ಯ ಶಿವಪ್ರಸಾದ್ ಮೈಲೇರಿ, ಪ್ರಮುಖರಾದ ದಿನೇಶ್ ದೇಂತಾರು, ಜೈ ಆಂಜನೇಯ ಪ್ಲವರ್ ಸ್ಟಾಲ್ ಮಾಲಕ ತಿರುಮಲೇಶ್ವರ ಸಾಕೋಟೆ, ಪುನೀತ್ ದೇಂತಾರು, ಪ್ರೇಮಚಂದ್ರ ಹಾಗೂ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.
Also Read ಬೆಳ್ತಂಗಡಿ: ಹೊಸ ವರ್ಷಾಚರಣೆ ಮುಗಿಸಿ ಮನೆಗೆ ಬಂದ ಮಗ ► ಕುಡಿದ ಮತ್ತಿನಲ್ಲಿ ತಂದೆಗೆ ಗಾಜಿನ ಚೂರಿನಿಂದ ಇರಿತ