ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವಿಶ್ವ ಗೂಬೆ ಜಾಗೃತಿ ದಿನಾಚರಣೆ ➤ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.8.ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವಿಶ್ವ ಗೂಬೆ ಜಾಗೃತಿ ದಿನಾಚರಣೆ – 2019 ರ ಪ್ರಯುಕ್ತ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಗತ್ತನ್ನು ಗೂಬೆಗಳಿಗೆ ಉತ್ತಮ ಸ್ಥಳವನ್ನಾಗಿ ಮಾಡೋಣ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಹಾಗೂ ವಿದ್ಯಾರ್ಥಿಗಳಲ್ಲಿ ಗೂಬೆಗಳ ಸಂರಕ್ಷಣೆಯ ಅಗತ್ಯದ ಬಗ್ಗೆ ಜಾಗೃತಿ ಮೂಡಿಸಲು ಗೂಬೆಗಳ ವೀಕ್ಷಣಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.


ಸ್ಪರ್ಧೆಯ ನಿಯಮಗಳು ಇಂತಿವೆ: ಪ್ರಬಂಧವನ್ನು ಆಂಗ್ಲ ಅಥವಾ ಕನ್ನಡದಲ್ಲಿ ಬರೆಯಬೇಕು, ಪ್ರಬಂಧವು 2000 ಅಕ್ಷರಗಳ ಒಳಗಿರಬೇಕು, ವಿದ್ಯಾರ್ಥಿಗಳು ತಮ್ಮ ಹೆಸರು, ತರಗತಿ, ಶಾಲೆಯ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಪ್ರತ್ಯೇಕ ಹಾಳೆಯಲ್ಲಿ ನಮೂದಿಸಬೇಕು. ಪ್ರಬಂಧಗಳನ್ನು ಆಗಸ್ಟ್ 17 ರೊಳಗಾಗಿ ನಿರ್ದೇಶಕರು, ಪಿಲಿಕುಳ ಜೈವಿಕ ಉದ್ಯಾನವನ, ಮೂಡುಶೆಡ್ಡೆ, ಮಂಗಳೂರು-575028 ಇಲ್ಲಿಗೆ ಕಳುಹಿಸಬೇಕು.

ಗೂಬೆಗಳ ವೀಕ್ಷಣಾ ಸ್ಪರ್ಧೆಯಲ್ಲಿ ಎಲ್ಲಾ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಸ್ಪರ್ಧೆಯ ನಿಯಮಗಳು ಇಂತಿವೆ: ವಿದ್ಯಾರ್ಥಿಗಳು ಗೂಬೆಗಳಿಗೆ ತೊಂದರೆ ಕೊಡದೆ ವೀಕ್ಷಿಸಬೇಕು, ತಮ್ಮ ಮನೆಯ ಹತ್ತಿರ, ಗದ್ದೆಗಳಲ್ಲಿ, ಕಾಡುಗಳಲ್ಲಿ ಹಾಗೂ ಹೂದೋಟಗಳಲ್ಲಿ ಕಂಡು ಬಂದ ಗೂಬೆಗಳನ್ನು ಗುರುತಿಸಬಹುದು, ಗೂಬೆಗಳು ಕಂಡು ಬಂದ ಸ್ಥಳ, ಗೂಬೆಗಳ ಹೆಸರು, ಚಲನವಲನಗಳನ್ನು ವೀಕ್ಷಿಸಿ ವಿವರಗಳನ್ನು ಬರೆಯಬೇಕು.

Also Read  ಕೊರೋನಾ ಸೋಂಕಿಗೆ ಕಡಬ ತಾಲೂಕಿನ ವ್ಯಕ್ತಿ ಮೃತ್ಯು

ವಿದ್ಯಾರ್ಥಿಗಳು ತಮ್ಮ ಹೆಸರು, ತರಗತಿ, ಶಾಲೆಯ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಪ್ರತ್ಯೇಕ ಹಾಳೆಯಲ್ಲಿ ನಮೂದಿಸಬೇಕು. ವೀಕ್ಷಿಸಿದ ವಿವರಗಳನ್ನು ಆಗಸ್ಟ್ 17 ರೊಳಗಾಗಿ ನಿರ್ದೇಶಕರು, ಪಿಲಿಕುಳ ಜೈವಿಕ ಉದ್ಯಾನವನ, ಮೂಡುಶೆಡ್ಡೆ, ಮಂಗಳೂರು-575028 ಇಲ್ಲಿಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0824-2263300, +919738363450 ಮತ್ತು ವೆಬ್ ಸೈಟ್ www.pilikulazoo.com   ಸಂಪರ್ಕಿಸಬಹುದು ಎಂದು ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕರಾದ ಹೆಚ್.ಜೆ ಭಂಡಾರಿ ಇವರ ಪ್ರಕಟಣೆ ತಿಳಿಸಿದೆ.

Also Read  ಶಾಲಾ ಬಸ್ ನ ಕಿಟಕಿಯಿಂದ ತಲೆ ಹೊರಹಾಕಿದ ವಿದ್ಯಾರ್ಥಿನಿ - ತಲೆ ಕಂಬಕ್ಕೆ ಬಡಿದು ಬಾಲಕಿ ಮೃತ್ಯು

 

error: Content is protected !!
Scroll to Top