ಯುವಕ ನಾಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.8.ಮಂಗಳೂರು ತಾಲೂಕು ಶಿವಶಕ್ತಿ ನಗರ ನಿವಾಸಿ ನಿತೀಶ್ ಕುಮಾರ್ (ಪ್ರಾಯ 19 ) ಜೂನ್ 29 ರಂದು ಕಾಣೆಯಾಗಿದ್ದಾರೆ ಎಂದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.


ಕಾಣೆಯಾದ ವ್ಯಕ್ತಿಯ ಚಹರೆ ಇಂತಿವೆ: ಎತ್ತರ 5.5 ಇಂಚು, ಎಣ್ಣೆ ಕಪ್ಪು ಮೈ ಬಣ್ಣ, ಎಡ ಕಾಲಿನ ಹೆಬ್ಬೆರಳಿನ ಮೇಲೆ ಯು ಆಕಾರದ ಕಪ್ಪು ಮಚ್ಚೆ ಇದೆ, ಎಡ ಕೈಯಲ್ಲಿ ಆಂಜನೇಯ ದೇವರ ಹಚ್ಚೆ ಇದೆ, ಮತ್ತು ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಗಳನ್ನು ಮಾತಾನಾಡುತ್ತಾರೆ.ಈ ಚಹರೆಯುಳ್ಳ ವ್ಯಕ್ತಿಯ ಪತ್ತೆಯಾದಲ್ಲಿ ಸುರತ್ಕಲ್ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0824-2290533, 9480805359, 9480805332 ಅಥವಾ ಮಂಗಳೂರು ನಗರ ಕಂಟ್ರೋಲ್ ರೂಮ್ ನಂ.0824-2220800 ಮಾಹಿತಿ ನೀಡುವಂತೆ ಠಾಣಾಧಿಕಾರಿಗಳು, ಸುರತ್ಕಲ್ ಪೊಲೀಸ್ ಠಾಣೆ ಇವರ ಪ್ರಕಟಣೆ ತಿಳಿಸಿದೆ.

Scroll to Top