ವ್ಯಕ್ತಿ ಕಾಣೆಯಾಗಿದ್ದಾರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.8.ಮಂಗಳೂರು ತಾಲೂಕು, ಕುತ್ತೆತ್ತೂರು ಗ್ರಾಮ, ಕೊಡಂಗೆ ನಿವಾಸಿ ಮೋಹನ್‍ದಾಸ್ ಶೆಟ್ಟಿ (ಪ್ರಾಯ 30 ವರ್ಷ) ಜುಲೈ 20 ರಂದು ಕಾಣೆಯಾಗಿದ್ದಾರೆ ಎಂದು ಸುರತ್ಕಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಾಣೆಯಾದ ವ್ಯಕ್ತಿಯ ಚಹರೆ ಇಂತಿವೆ: ಎತ್ತರ 5.4, ಬಿಳಿ ಮೈಬಣ್ಣ, ಸಾಧಾರಣ ಶರೀರ, ಕಪ್ಪು ಗುಂಗುರು ಕೂದಲು, ಕಪ್ಪು ಮೀಸೆ, ಕುತ್ತಿಗೆಯ ಬಲ ಬದಿಯಲ್ಲಿ ಕಪ್ಪು ಮಚ್ಚೆ, ಬಲಕೋಲು ಕಾಲಿನಲ್ಲಿ ಹಳೇ ಗಾಯದ ಗುರುತು, ಧರಿಸಿದ ಬಟ್ಟೆ ಜೀನ್ಸ್ ಪ್ಯಾಂಟ್ ಮತ್ತು ಟೀ ಶರ್ಟ್, ಮತ್ತು ಕನ್ನಡ, ತುಳು, ಹಿಂದಿ ಭಾಷೆಗಳನ್ನು ಮಾತಾನಾಡುತ್ತಾರೆ.ಈ ಚಹರೆಯುಳ್ಳ ವ್ಯಕ್ತಿಯ ಪತ್ತೆಯಾದಲ್ಲಿ ಸುರತ್ಕಲ್ ಠಾಣೆ ದೂರವಾಣಿ ಸಂಖ್ಯೆ 0824-2220540, 9480802345, 9480805360 ಅಥವಾ ಮಂಗಳೂರು ನಗರ ಕಂಟ್ರೋಲ್ ರೂಂ ನಂ. 0824-2220800 ಮಾಹಿತಿ ನೀಡುವಂತೆ ಠಾಣಾಧಿಕಾರಿಗಳು, ಸುರತ್ಕಲ್ ಪೊಲೀಸ್ ಠಾಣೆ ಇವರ ಪ್ರಕಟಣೆ ತಿಳಿಸಿದೆ.

Also Read  ವಿಶ್ವ ಹಿಂದು ಪರಿಷದ್ ಬಜರಂಗದಳ ಶ್ರೀ ವೈದ್ಯನಾಥ ಶಾಖೆ➤ ರಕ್ತದಾನ ಶಿಬಿರ

error: Content is protected !!
Scroll to Top