ಹೆಲ್ಪಿಂಗ್ ಹ್ಯಾಂಡ್ಸ್ (ರಿ)ಟ್ರಸ್ಟ್ ಕರೈ ಕೊಳ್ನಾಡು ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

(ನ್ಯೂಸ್ ಕಡಬ) newskadaba.com ವಿಟ್ಲ, ಆ.15. ಕೊಳ್ನಾಡು ಗ್ರಾಮದ ಹೆಲ್ಪಿಂಗ್ ಹ್ಯಾಂಡ್ಸ್ (ರಿ) ಟ್ರಸ್ಟ್ ವತಿಯಿಂದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ಊರಿನ ಉದ್ಯಮಿ ಮೊಹ್ದಿನ್ ಕರೈ ನೆರವೇರಿಸಿದರು. ದುವಾ ಆಶಿರ್ವಾದವನ್ನು ಮಸೀದಿಯ ಖತೀಬ್ ಅಬ್ದುಲ್ ಹಕೀಂ ದಾರಿಮಿ ನಡೆಸಿದರು. ಟ್ರಸ್ಟ್ ಸ್ಥಾಪಕದ್ಯಕ್ಷ ಎಚ್.ಎಂ. ಖಾಲೀದ್ ಕೊಳ್ನಾಡು, ಹಾಗೂ ಶಶಿ ಕುಮರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಊರಿನ ಹಿರಿಯ ಅಬ್ದುರಹಿಮಾನ್ ಕರೈ, ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಕೆ.ಎಂ. ಲತೀಪ್ ಪರ್ತಿಪ್ಪಾಡಿ, ಟ್ರಸ್ಟ್ ಪದಾಧಿಕಾರಿಗಳಾದ ಅಸೀಪ್ ಕರೈ, ಶಮೀರ್ ಕರೈ, ಮೊಹ್ಧೀನ್ ಇಲ್ಯಾಸ್ ಕರೈ, ನಾಸೀರ್ ಸೌದಿ, ಟ್ರಸ್ಟ್ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಅರೀಪ್ ಕರೈ ಸ್ವಾಗತಿಸಿದರು.

Also Read  ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಸಾಗಾಟ ➤ ಓರ್ವ ಆರೋಪಿ ವಶಕ್ಕೆ

error: Content is protected !!
Scroll to Top