ಪ.ಪಂಗಡ – ಅಭಿವೃದ್ಧಿ ಕಾರ್ಯಕ್ರಮಗಳಡಿ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.7.2018-19ನೇ ಸಾಲಿನಲ್ಲಿ ಭಾರತ ಸಂವಿಧಾನ ಅನುಚ್ಛೇಧ 275(1)ರಡಿ ಹಾಗೂ ವಿಶೇಷ ಕೇಂದ್ರೀಯ ನೆರವಿನಡಿ ಪರಿಶಿಷ್ಟ ಪಂಗಡವರ ಅಭಿವೃದ್ಧಿ ಕಾರ್ಯಕ್ರಮಗಳಡಿ  ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಫಲಾನುಭವಿಗಳ ಆಧಾರಿತ ಕಾರ್ಯಕ್ರಮಗಳಾದ ಹೈನುಗಾರಿಕೆ, ಹಸು/ಎಮ್ಮೆ ಕರು ಘಟಕ, ಕುರಿ/ಮೇಕೆ ಘಟಕ, ಸರಕು ಸಾಗಾಣಿಕೆ ವಾಹನ, ಹಂದಿ ಸಾಕಾಣಿಕೆ ಸೌಲಭ್ಯ ಪಡೆಯಲು ಷರತ್ತಿಗೊಳಪಟ್ಟು ಆಸಕ್ತ ಅರ್ಜಿದಾರರಿಂದ ನಿಗಧಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.ಆದ್ದರಿಂದ ಮೂಲನಿವಾಸಿ ಮತ್ತು ಅರಣ್ಯ ಅವಲಂಭಿತ ಪರಿಶಿಷ್ಟ ವರ್ಗದವರು ನಿಗಧಿತ ನಮೂನೆಯ ಅರ್ಜಿಯನ್ನು ಸಂಬಂಧಪಟ್ಟ ತಾಲೂಕಿನ ಸಹಾಯಕ ನಿರ್ದೇಶಕರು, (ಗ್ರೇಡ್-1&2) ಸಮಾಜ ಕಲ್ಯಾಣ ಇಲಾಖೆ, ಇವರಿಂದ ಪಡೆದು, ಅರ್ಜಿಯನ್ನು ಭರ್ತಿ ಮಾಡಿ ಸೂಕ್ತ ದಾಖಲಾತಿಗೊಂದಿಗೆ ಆಗಸ್ಟ್ 26 ರಂದು ಸಂಜೆ 5.30ರೊಳಗೆ ಸಲ್ಲಿಸಬೇಕು.


ಷರತ್ತುಗಳು: ಅರ್ಜಿದಾರರು ಕರ್ನಾಟಕದವರಾಗಿದ್ದು, ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಹೈನುಗಾರಿಕೆ, ಹಸು/ಎಮ್ಮೆ ಕರು ಘಟಕ, ಕುರಿ/ಮೇಕೆ ಘಟಕ, ಹಂದಿ ಸಾಕಾಣಿಕೆ ಸೌಲಭ ಪಡೆಯುವ ಅರ್ಜಿದಾರ ವಯಸ್ಸು 18 ರಿಂದ 60 ವರ್ಷದೊಳಗಿರಬೇಕು ಅರ್ಜಿದಾರರ ವಾರ್ಷಿಕ ಆದಾಯ ರೂ.1.50 ಲಕ್ಷಗಳ ಒಳಗಡೆ ಇರಬೇಕು. ಅರ್ಜಿದಾರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರು ಸರ್ಕಾರಿ ನೌಕರಿಯಲ್ಲಿರಬಾರದು. ಅರ್ಜಿದಾರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರು ಯಾವುದೇ ಯೋಜನೆಯಡಿ ಈ ಹಿಂದೆ ಯಾವುದೇ ಇಲಾಖೆ/ನಿಗಮದಿಂದ ಯಾವುದೇ ಯೋಜನೆಯಡಿ ಸೌಲಭ್ಯವನ್ನು ಪಡೆದಿರಬಾರದು.

Also Read  ನಾಪತ್ತೆಯಾಗಿದ್ದ ಪರ್ವತಾರೋಹಿ ➤ 50 ವರ್ಷಗಳ ಬಳಿಕ ಮೃತದೇಹ ಪತ್ತೆ..!

ಪಡೆದ ಘಟಕ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಪ್ರಮಾಣ ಪತ್ರ ನೀಡಬೇಕು. ಅರ್ಜಿದಾರರು ಬಿಪಿಎಲ್ ಮತ್ತು ಆಧಾರ್ ಕಾರ್ಡ್ ಹೊಂದಿರಬೇಕು. ಹೈನುಗಾರಿಕೆ ಮತ್ತು ಕುರಿ, ಮೇಕೆ ಘಟಕಗಳನ್ನು ಮಹಿಳೆಯವರಿಗೆ ಮಾತ್ರ ನೀಡಲಾಗುವುದು. ಸರಕು ಸಾಗಾಣಿಕೆ ವಾಹನ ಪಡೆಯುವ ಅರ್ಜಿದಾರರ ವಯಸ್ಸು 18 ರಿಂದ 45 ವರ್ಷದೊಳಗಿರಬೇಕು. ಸರಕು ಸಾಗಾಣಿಕೆ ವಾಹನ ಪಡೆಯುವ ಅರ್ಜಿದಾರರು ಡ್ರೈವಿಂಗ್ ಲೈಸೆನ್ಸ್(ಲಘು/ಭಾರಿ)ಹೊಂದಿರಬೇಕು. ಸರಕು ಸಾಗಾಣಿಕೆ ವಾಹನ ಪಡೆಯುವ ಅರ್ಜಿದಾರರ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶವಾದಲ್ಲಿ ರೂ.1.50 ಲಕ್ಷ ಹಾಗೂ ನಗರ ಪ್ರದೇಶವಾದಲ್ಲಿ ರೂ.2 ಲಕ್ಷ ಮಿತಿಯೊಳಗಿರಬೇಕು ಎಂದು ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ದಿ ಯೋಜನೆ ದ.ಕ ಜಿಲ್ಲೆ ಇವರ ಪ್ರಕಟಣೆ ತಿಳಿಸಿದೆ.

Also Read    ಮದುವೆಯ ವೇಳೆ ಗಾಳಿಯಲ್ಲಿ 4 ಗುಂಡು ಹಾರಿಸಿದ ವಧು!   ➤ ಬೆಚ್ಚಿಬಿದ್ದ ವರ

error: Content is protected !!
Scroll to Top