ನೇಲ್ಯಡ್ಕ ಶಾಲೆಗೆ ಶಿಕ್ಷಕರಿಗಾಗಿ ಮೌನ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.2.ಐತೂರು ಗ್ರಾಮದ ನೇಲ್ಯಡ್ಕ ಹಿ.ಪ್ರಾ. ಶಾಲೆಗೆ ಶಿಕ್ಷಕರನ್ನು ನೀಡುವಂತೆ ಆಗ್ರಹಿಸಿ ಶಾಲಾಭಿವೃಧ್ದಿ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ, ಪೋಷಕರು ಸೇರಿ ಐತೂರು ಗ್ರಾ.ಪಂ. ನೇತೃತ್ವದಲ್ಲಿ ಆ.2 ರಂದು ಶಾಲಾ ವಠಾರದಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಲಲಿತರವರು, ನಾವು ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಸಿಗುತ್ತಿಲ್ಲ, ಶಾಲೆಗೆ ಶಿಕ್ಷಕರನ್ನು ಕೊಡುವಂತೆ ಇಲ್ಲಿಯ ಗ್ರಾ.ಪಂ. ಅಧ್ಯಕ್ಷರ ನೇತ್ರತ್ವದಲ್ಲಿ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ರವರಿಗೆ ಮನವಿ ಸಲ್ಲಿಸಿ ಕೂಡಲೇ ಶಾಲೆಗೆ ಶಿಕ್ಷಕರನ್ನು ಕೊಡುವಂತೆ ಒತ್ತಾಯಿಸಿದ್ದೇವೆ. ನಮ್ಮ ಬೇಡಿಕೆಗೆ ಸ್ಪಂದಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಯವರು ನೇಲ್ಯಡ್ಕ ಶಾಲೆಗೆ ಶಿಕ್ಷಕರನ್ನು ನೀಡುವುದಾಗಿ ಒಪ್ಪಿಕೊಂಡಿದ್ದರು.

ಆದರೆ ನಂತರ ಅವರು ಶಿಕ್ಷಕರನ್ನು ಭಡ್ತಿಗೊಳಿಸದೆ ಇಬ್ಬರು ಅತಿಥಿ ಶಿಕ್ಷಕರನ್ನು ನೀಡಿದ್ದು ನಮಗೆ ಡೆಪ್ಟೇಶನ್ ಶಿಕ್ಷಕರನ್ನು ಕಳುಹಿಸುತ್ತೇನೆಂದು ಹೇಳಿ ಕಳುಹಿಸಿ, ನಮಗೆ ಇಲ್ಲಿಗೆ ಡೆಪ್ಟೇಶನ್ ಶಿಕ್ಷಕರನ್ನು ನೀಡುವವರೆಗೆ ನಾವು ಇಲ್ಲಿಂದ ಕದಲುವುದಿಲ್ಲವೆಂದು ಆಗ್ರಹಿಸಿ ಸತ್ಯಾಗ್ರಹ ನಡೆಸಿದರು.ಗ್ರಾ.ಪಂ. ಅಧ್ಯಕ್ಷ ಸತೀಶ್.ಕೆ. ಮಾತನಾಡಿ, ನಾವು ಕಳೆದ ಜು.22ರಂದು ನೇರವಾಗಿ ಹೋಗಿ ಕ್ಷೇತ್ರ ಶಿಕ್ಷಣಾಧಿಕಾರಿರವರಲ್ಲಿ ಮನವಿ ಮಾಡಿಕೊಡಂತೆ ಶಾಲಾ ಶಿಕ್ಷಕರ ಕೊರತೆ ನೀಗುವುದಾಗಿ ಒಪ್ಪಿಕೊಂಡು ಬಳಿಕ ಸುಮ್ಮನೆ ಕುಳಿತಿದ್ದಾರೆ. ನಿನ್ನೆ ಒಬ್ಬರು ಅತಿಥಿ ಶಿಕ್ಷಕರನ್ನು ನೇಮಿಸಿದ ಬಗ್ಗೆ ಆದೇಶ ಮಾಡಿದ್ದಾರೆ. ಆದರೆ ಇಲ್ಲಿಗೆ ಒಟ್ಟು ಡೆಪ್ಟೇಶನ್ ಮಾಡಬೇಕೆಂದು ಹೇಳಿದ ಬಗ್ಗೆ ಅವರು ಮಾಡಿಲ್ಲ.

Also Read  ಮಂಗಳೂರು: ಯುವಕನಿಗೆ ಚೂರಿ ಇರಿತ ➤ ಪ್ರವೀಣ್ ಕೊಲೆ ಬೆನ್ನಲ್ಲೇ ಮತ್ತೊಂದು ಪ್ರಕರಣ

ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಲೇ ಶಾಲೆಗೆ ವಿದ್ಯಾರ್ಥಿಗಳು ಕಡಿಮೆಯಾಗಲು ಕಾರಣ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡದಿದ್ದರೆ ಪೋಷಕರು ತಮ್ಮ ವiಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುತ್ತಾರೆಯೇ ಎಂದು ಪ್ರಶ್ನಿಸಿದ ಅವರು ಕೂಡಲೇ ಇಲ್ಲಿಗೆ ಒಬ್ಬ ಶಿಕ್ಷಕರನ್ನು ಡೆಪ್ಟೇಶನ್ ಮಾಡಬೇಕೆಂದು ಆಗ್ರಹಿಸಿದರು. ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಿ.ಪಿ ಜೋನ್ ಮಾತನಾಡಿ, ಸರಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಿ ಎನ್ನುತ್ತಿರುವ ಸರಕಾರ ಶಾಲೆಗೆ ಶಿಕ್ಷಕರನ್ನು ನೇಮಿಸುವುದಿಲ್ಲ. ಅತಿಥಿ ಶಿಕ್ಷಕರಿಗೆ ನಾವು ಪೋಷಕರೇ ಪ್ರತೀ ತಿಂಗಳು ರೂ.200 ರಂತೆ ನೀಡಿ ನಮ್ಮ ಮಕ್ಕಳಿಗೆ ಪಾಠ ಮಾಡಬೇಕಾಗುತ್ತದೆ. ಹಾಗಾದರೆ ನಮಗೆ ಸರಕಾರಿ ಶಾಲೆಯ ಅಗತ್ಯವಿದೆಯೇ ಎಂದು ಪ್ರಶ್ನಿಸಿದ ಅವರು ಹಾಗಾದರೆ ಎಲ್ಲರೂ ಮಕ್ಕಳನ್ನು ಪ್ರೈವೇಟ್ ಶಾಲೆಗೆ ಕಳುಹಿಸುತ್ತಾರೆ.ಇಲ್ಲದಿದ್ದರೆ ಈ ಶಾಲೆಯನ್ನು ದತ್ತು ನೀಡಿ ನಾವೇ ಊರಿನವರು ನಡೆಸುತ್ತೇವೆ ಎಂದರು.

ಶ್ರೀ ಕ್ಷೇತ್ರ ಧ.ಗ್ರಾ ಯೋಜನೆ ಐತೂರು ಎ. ಒಕ್ಕೂಟದ ಅಧ್ಯಕ್ಷ ರಘುರಾಮ್ ಭಟ್ ಮಾತಾನಾಡಿ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಸರಿಯಾಗಿ ಶಿಕ್ಷಕರನ್ನು ನೀಡಬೇಕು. ನಾವು ಊರಿನವರೆಲ್ಲ ಈ ಸರಕಾರಿ ಶಾಲೆ ಉಳಿಯಲು ಸತತ ಪ್ರಯತ್ನ ಪಟ್ಟಿದ್ದೇವೆ. ಈಗ ಶಾಲೆಗೆ ಶಿಕ್ಷಕರಿಲ್ಲದೆ ಮಕ್ಕಳಿಗೆ ಸರಿಯಾಗಿ ಶಕ್ಷಣ ಸಿಗದಂತಾಗುತ್ತದೆ ಎಂದು ಅವರು ಕೂಡಲೇ ಶಕ್ಷಕರನ್ನು ನೀಡುವಂತೆ ಆಗ್ರಹಿಸಿದರು.ಗ್ರಾ.ಪಂ. ಸದಸ್ಯ ಶ್ರೀಧರ ಸುಳ್ಯ, ಮಾತನಾಡಿ, ಶಾಲೆಯಲ್ಲಿ ಶಿಕ್ಷಕರಿಲ್ಲದೆ ನಾವು ಒದ್ದಾಡುತಿದ್ದೇವೆ ಆದರೆ ಜವಬ್ದಾರಿಯುತ ಸ್ಥಾನದಲ್ಲಿ ಇರುವ ಜಿ.ಪಂ. ಸದಸ್ಯ ಇಲ್ಲಿಗೆ ಭೇಟಿನೀಡದೆ ಸಮಸ್ಯೆಯ ಬಗ್ಗೆ ಪೋಷಕರಲ್ಲಿ ಚರ್ಚಿಸದೆ ಪತ್ರಿಕಾ ಹೇಳಿಕೆ ನೀಡಿ ಶಾಲೆಗೆ ಶಿಕ್ಷಕರಕೊರತೆ ನೀಗಿಸಲಾಗಿದೆ ಎಂದು ತಿಳಿಸಿದ್ದಾರೆ. ಎಂದು ಆರೋಪಿಸಿದರು.ಸುಳ್ಯ ಕ್ಷೇತ್ರದ ಶಾಸಕ ಎಸ್. ಅಂಗಾರರವರು ಸ್ಥಳಕ್ಕಾಗಮಿಸಿ ಸಮಸ್ಯೆಯನ್ನು ಅರಿತು ಜಿಲ್ಲಾ ಸಾರ್ವಜನಿಕ ಶಿಕ್ಷಣಾಧಿಕಾರಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿದರು.

Also Read  ಗ್ರಾಹಕರ ಸೋಗಿನಲ್ಲಿ ಬಂದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ➤ ಮೂವರು ಮಹಿಳೆಯರ ಬಂಧನ

ಬಂಟ್ರಕ್ಲಸ್ಟರ್ ನ ಸಿ.ಅರ್.ಪಿ. ಪೊಡಿಯರವರು ಪ್ರತಿಭಟನಾ ಸ್ಥಳಕ್ಕೆಬಂದು ಪ್ರತಿಭಟನೆಯನ್ನು ಕೈಬಿಡುವಂತೆ ಮನವಿಮಾಡಿಕೊಂಡರಲ್ಲದೆ,ಶಿಕ್ಷಕರ ಸಮಸ್ಯೆ ಬಗ್ಗೆ ಮೇಲಾಧಿಕಾರಿಗಳಲ್ಲಿ ಚರ್ಚಿಸಿ ಮುಂದೆ ಸಮಸ್ಯೆ ಬಗೆಹರಿಸಲಾಗೂದು ಎಂದರು. ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಚೆನ್ನಪ್ಪ, ಹಿರಿಯ ಮುಖಂಡರಾದ ನಾರಾಯಣ ರೈ ಅತ್ಯಡ್ಕ, ಎಸ್.ಡಿ.ಎಂ.ಸಿ ಸದಸ್ಯರು,ಹಿರಿಯ ವಿದ್ಯಾರ್ಥಿಸಂಘದವರು, ಪೋಷಕರು,ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಶಿಕ್ಷಕರನ್ನು ನೀಡುವವರೆಗೆ ಪ್ರತಿಭಟನೆ ಕೈಬಿಡದಂತೆ ತೀರ್ಮಾನ.ಶಾಲೆಗೆ ಇನ್ನೊಬ್ಬ ಖಾಯಂ ಶಿಕ್ಷಕರನ್ನು ನೀಡುವವರೆಗೆ ನಾವು ಇಲ್ಲಿಂದ ಕದಲುದಿಲ್ಲ ಎಂದು ಆಗ್ರಹ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಮದ್ಯಾಹ್ನದ ಊಟವನ್ನು ಅಲ್ಲಿಯೇ ತಯಾರಿಸಿ ಊಟಮಾಡಿ ದಿನವಿಡಿ ಪ್ರತಿಭಟನೆ ನಡೆಸಿದರು.ಶಾಲಾ ವಠಾರ ಆಗಿರುದರಿಂದ ಮಕ್ಕಳಿಗೆ ಪಾಠಕ್ಕೆ ತೊಂದರೆಯಾಗಬಾರದೆಂದು ಯಾವುದೇ ಘೋಷಣೆಗಳನ್ನು ಕೂಗದೇ ಮೌನಪ್ರತಿಭಟನೆಯನ್ನು ಮುಂದುವರಿಸಿದ್ದು ಹಿರಿಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸಮಸ್ಯೆ ಪರಿಹರಿಸಬೇಕೆಂದು ಆಗ್ರಹವ್ಯಕ್ತಪಡಿಸಿದರು.

error: Content is protected !!
Scroll to Top