“ಜೀವನದಲ್ಲಿ ಗುರಿಯನ್ನು ಸಾಧಿಸುವ ಛಲದೊಂದಿಗೆ ಮುನ್ನಡೆಯಿರಿ“ ➤ ಡಾ. ಅಮಿತಾಬ್ ಆನಂದ್

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.2.ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಂಗಳೂರು ರಥಬೀದಿ ಇಲ್ಲಿ ಜುಲೈ 31 ರಂದು ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಅಭಿವಿನ್ಯಾಸ ಕಾರ್ಯಕ್ರಮವನ್ನು ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಳದ (ಐಕ್ಯೂಎಸಿ) ವತಿಯಿಂದ ಏರ್ಪಡಿಸಲಾಗಿತ್ತು.


ಫ್ರಾನ್ಸ್‍ನ ಸ್ಕೇಮಾ ಬಿ- ಸ್ಕೂಲ್‍ನ ಸಹಾಯಕ ಪ್ರಾಧ್ಯಾಪಕರು ಹಾಗೂ ಮಾನವ ಸಂಪನ್ಮೂಲ ತರಬೇತುದಾರರೂ ಆಗಿರುವ ಡಾ. ಅಮಿತಾಬ್ ಆನಂದ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ತನ್ನ ಜೀವನ ಚರಿತ್ರೆಯ ನಿದರ್ಶನವನ್ನು ನೀಡುತ್ತಾ ”ವಿದ್ಯಾರ್ಥಿಗಳು ಜೀವನದಲ್ಲಿ ಶಿಸು, ಸಂಯಮದಿಂದ ಮುನ್ನಡೆಯಬೇಕು. ತಮ್ಮ ಗುರಿಯನ್ನು ಸಾಧಿಸುವವರೆಗೆ ಛಲದೊಂದಿಗೆ ಮುಂದುವರಿದು, ತಮ್ಮದೇ ಆದ ಅಸ್ಮಿತೆಯನ್ನು ರೂಪಿಸಿಕೊಳ್ಳಬೇಕು” ಎಂದು ಹಿತನುಡಿಗಳನ್ನಾಡಿದರು.

Also Read  'PM Kisan' ಯೋಜನೆಯಡಿ ವಾರ್ಷಿಕ 6 ಸಾವಿರವಲ್ಲ, ಇನ್ಮುಂದೆ 8 ಸಾವಿರ ಲಭ್ಯ     

ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಶೇಖರ್ ಹೆಬ್ಬಾರ್ ಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿ ಕ್ಷೇತ್ರಪಾಲನಾಧಿಕಾರಿ  ಡಾ. ಜಯಕರ್ ಭಂಡಾರಿ ಸ್ವಾಗತಿಸಿದರು. ಮುಖ್ಯ ಶೈಕ್ಷಣಿಕ ಸಲಹೆಗಾರ ಡಾ. ಶಿವರಾಮ ಪಿ ಹಾಗೂ ಐಕ್ಯೂಎಸಿ ಸಂಚಾಲಕ ಡಾ. ತೆರೆಜ್ ಪಿರೇರಾ ಉಪಸ್ಥಿತರಿದ್ದರು. ಸುಮಾರು 800 ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದರು.

 

error: Content is protected !!
Scroll to Top