(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.2.ಮನೆ ಕೆಲಸಕ್ಕೆಂದು ಒರಿಸ್ಸಾ ರಾಜ್ಯದಿಂದ ನಗರಕ್ಕೆ ಬಂದಿದ್ದ ಯುವತಿ ನಾಪತ್ತೆಯಾಗಿರುವ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇಲ್ಲಿನ ಅನಿತಾ ನಝ್ರತ್ ಎಂಬವರ ಮನೆ ಕೆಲಸಕ್ಕೆ ಒರಿಸ್ಸಾ ರಾಜ್ಯದಿಂದ ಕುಮಾರಿ ಲೀಲಾಮಣಿ (18 ವರ್ಷ) ಎಂಬ ಹುಡುಗಿ ಜುಲೈ 7 ರಂದು ಬಂದಿದ್ದು, ಜುಲೈ 30 ರಂದು ಕಾಣೆಯಾಗಿರುವ ಬಗ್ಗ್ಲೆ ಪ್ರಕರಣ ದಾಖಲಾಗಿರುತ್ತದೆ.

ಕಾಣೆಯಾದ ಯುವತಿಯ ಚಹರೆ ಇಂತಿವೆ: ಎತ್ತರ- 5.2 ಅಡಿ, ಮಾತನಾಡುವ ಭಾಷೆ- ಹಿಂದಿ ಮತ್ತು ಒಡಿಯಾ ಭಾಷೆ, ಚಹರೆ- ಸಾಧಾರಣ ಮೈ ಕಟ್ಟು, ದುಂಡು ಮುಖ, ಮೈ ಬಣ್ಣ- ಬಿಳಿ ಮಿಶ್ರಿತ ಗೋದಿ ಮೈಬಣ್ಣ ಹೊಂದಿದ್ದಾರೆ.ಈ ಚಹರೆಯುಳ್ಳ ಹುಡುಗಿಯ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ನಿರೀಕ್ಷಕರು, ಮಂಗಳೂರು ಪೂರ್ವ ಪೊಲೀಸ್ ಠಾಣೆ, ದೂರವಾಣಿ ಸಂಖ್ಯೆ- 2220520 ಅಥವಾ ಜಿಲ್ಲಾ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ 2220800- 2220801 ಮಂಗಳೂರು ಇವರಿಗೆ ತಿಳಿಸುವಂತೆ ಪ್ರಕಟಣೆ ತಿಳಿಸಿದೆ.










