ವಿಶೇಷ ಖಾದ್ಯ ➤ ರೈಸ್‌ ಖೀರ್‌

(ನ್ಯೂಸ್ ಕಡಬ) newskadaba.com,ವಿಶೇಷ ಖಾದ್ಯ:ರೈಸ್‌ ಖೀರ್‌

ಬೇಕಾಗುವ ಸಾಮಗ್ರಿಗಳು:
•ಹಾಲು -2 ರಿಂದ 4 ಕಪ್‌
•ಅಕ್ಕಿ – 1 ಕಪ್‌
•ಸಕ್ಕರೆ – 1 ರಿಂದ 2 ಕಪ್‌
•ಗೋಡಂಬಿ- 8 ರಿಂದ 10
•ದ್ರಾಕ್ಷಿ – ಬೇಕಾದಷ್ಟು
•ಬಾದಮ್‌ – ಬೇಕಾದಷ್ಟು ( ಚಿಕ್ಕ ಚಿಕ್ಕದಾಗಿ ಪುಡಿ ಮಾಡಿಟ್ಟುಕೊಳ್ಳಬೇಕು)
•ತುಪ್ಪ: ಸ್ವಲ್ಪ

ಮಾಡುವ ವಿಧಾನ
ಒಂದು ಬಾಣಲೆಗೆ 4ರಿಂದ 5 ಕಪ್‌ ಹಾಲನ್ನು ಹಾಕಿ, ಸ್ವಲ್ಪ ಬಿಸಿಯಾದ ಅನಂತರ ಅದಕ್ಕೆ 1ರಿಂದ 2 ಕಪ್‌ ನೆನೆಸಿಟ್ಟುಕೊಂಡ ಅಕ್ಕಿಯನ್ನು ಹಾಕಿ ಚೆನ್ನಾಗಿ ಕಲಕುತ್ತಾ ಇರಬೇಕು. ಅನಂತರ ಅದು ಒಂದು ಹದಕ್ಕೆ ಬಂದ ಅನಂತರ 1 ಕಪ್‌ ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಬೇಕು. ಮೊದಲು ಹಾಕಿದ ಅಕ್ಕಿ ಸರಿಯಾಗಿ ಬೇಯಲು ಬಿಡಬೇಕು. ಅನಂತರ ಇನ್ನೊಂದು ಚಿಕ್ಕ ಬಾಣಲೆಯಲ್ಲಿ ಗೋಡಂಬಿ, ದ್ರಾಕ್ಷಿ, ಬೇಕಾದಲ್ಲಿ ಚಿಕ್ಕ ಚಿಕ್ಕದಾಗಿ ಕುಟ್ಟಿದ ಬಾದಾಮ್‌ ಅನ್ನು ತುಪ್ಪದಲ್ಲಿ ಚೆನ್ನಾಗಿ ಹುರಿದುಕೊಳ್ಳಬೇಕು. ಅನಂತರ ಚೆನ್ನಾಗಿ ಬೆಂದ ಅನ್ನದ ಹದಕ್ಕೆ ಇದನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಬೇಕು. ಬೇಕಾದಲ್ಲಿ ತೆಳುವಾಗಲು ಇನ್ನು ಸ್ವಲ್ಲ ಹಾಲನ್ನು ಬೇರೆಸಿಕೊಳ್ಳಬಹುದು. ಅನಂತರ ಅದಕ್ಕೆ ಕೇಸರಿ ಹಾಕಿದರೆ ಸಿಹಿ ಸಿಹಿಯಾದ ರೈಸ್‌ ಖೀರ್‌ ಸವಿಯಲು ಸಿದ್ಧವಾಗಿರುತ್ತದೆ. ಇದನ್ನು ಹಬ್ಬದ ದಿನಗಳಲ್ಲಿ ಸುಲಭವಾಗಿ ಮಾಡಿಕೊಳ್ಳಬಹುದಲ್ಲದೆ ಸಮಯವನ್ನು ಉಳಿತಾಯ ಮಾಡುತ್ತದೆ.

Also Read  ನಾಟಿಕೋಳಿಗಳನ್ನು ಬಾಧಿಸುವ ಗ್ರಾಣಿಕೆಟ್ ವೈರಸ್‌ನ ಕೊಕ್ಕರೆ ರೋಗ ► ಆತಂಕದಲ್ಲಿ ಕೋಳಿ ಸಾಕಾಣಿಕೆದಾರರು - ರೋಗಕ್ಕಿರುವ ಪರಿಹಾರವೇನು..?

error: Content is protected !!
Scroll to Top