ಅರಣ್ಯ ಮತ್ತು ತೋಟಗಾರಿಕಾ ಘಟಕ ಮಂಗಳೂರು ಕಚೇರಿ ➤ ವಾಹನ ಹೊರಗುತ್ತಿಗೆ: ಟೆಂಡರ್ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.30.ವಲಯ ಅರಣ್ಯಧಿಕಾರಿಗಳು, ಅರಣ್ಯ ಮತ್ತು ತೋಟಗಾರಿಕಾ ಘಟಕ ಮಂಗಳೂರು ಕಚೇರಿ ಬಳಕೆಗಾಗಿ ಹೊರಗುತ್ತಿಗೆ ಬಾಡಿಗೆ ಆಧಾರದ ಮೇಲೆ ಆಸಕ್ತರಿಂದ ಸ್ಥಳೀಯವಾಗಿ ಟೆಂಡರ್ ಮೂಲಕ ಕೆಲವು ಮಾದರಿಯ ವಾಹನವನ್ನು ಪಡೆಯಲು ತೀರ್ಮಾನಿಸಲಾಗಿದೆ.

ಬೊಳಾರೊ ಜೀಪ್, ಟಾಟಾ ಇಂಡಿಗೊ, ಟಾಟಾ ಇಂಡಿಕಾ ಡಿಎಲ್‍ಎಕ್ಸ್, ಸ್ವಿಫ್ಟ್ ಡಿಸೈರ್ ಮಾದರಿಯ ವಾಹನವನ್ನು ಪಡೆಯಲು ತೀರ್ಮಾನಿಸಿದ್ದು, ಆಸಕ್ತರು ಆಗಸ್ಟ್ 20 ರಂದು ಅಪರಾಹ್ನ 5 ಗಂಟೆಯೊಳಗೆ ಟೆಂಡರು ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿ ಹಾಗೂ ಟೆಂಡರ್ ನಮೂನೆಯನ್ನು ಪಡೆಯಲು ಕಚೇರಿಯನ್ನು ಸಂಪರ್ಕಿಸಬೇಕು ಎಂದು ವಲಯ ಅರಣ್ಯಧಿಕಾರಿ, ಅರಣ್ಯ ಮತ್ತು ತೋಟಗಾರಿಕಾ ಘಟಕ, ಜಲಾನಯನ ಅಭಿವೃದ್ಧಿ ವಿಭಾಗ, ಕೃಷಿ ಇಲಾಖೆ ಇವರ ಪ್ರಕಟನೆ ತಿಳಿಸಿದೆ.

Also Read  ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ ಸಮಸ್ಯೆ ಶೀಘ್ರವೇ ಬಗೆಹರಿಸಿ- ಜಿಲ್ಲಾಧಿಕಾರಿ

error: Content is protected !!
Scroll to Top