ಹಿರಿಯ ಸುನ್ನೀ ನೇತಾರ, ‘ಶರಫುಲ್ ಉಲಮಾ’ ಅಬ್ಬಾಸ್ ಮುಸ್ಲಿಯಾರ್ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.29. ಸುನ್ನೀ ನೇತಾರ, ಮಂಜನಾಡಿ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಸ್ಥಾಪಕ ‘ಶರಫುಲ್ ಉಲಮಾ’ ಅಲ್‌ಹಾಜ್ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ (73) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ಅಪರಾಹ್ನ ನಿಧನರಾದರು.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಹಾಕತ್ತೂರು ಎಂಬಲ್ಲಿ 1946ರ ಜನವರಿ 1ರಂದು ಮುಹಮ್ಮದ್ ಕುಂಞಿ-ಬೀಫಾತಿಮಾ ಹಜ್ಜುಮ್ಮ ದಂಪತಿಯ ಪುತ್ರನಾಗಿ ಜನಿಸಿದ ಅಲ್‌ಹಾಜ್ ಶೈಖುನಾ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ 1994 ರಲ್ಲಿ ಮಂಜನಾಡಿಯಲ್ಲಿ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಸ್ಥಾಪಿಸುವ ಮೂಲಕ ಹಲವು ವಿದ್ಯಾರ್ಥಿಗಳ ಧಾರ್ಮಿಕ ಶಿಕ್ಷಣಕ್ಕೆ ಮೂಲ ಕಾರಣರಾಗಿದ್ದರು.

Also Read  ವಿಧಾನಪರಿಷತ್ ಚುನಾವಣೆ ➤ ಎಸ್ಡಿಪಿಐ ಅಭ್ಯರ್ಥಿಯಿಂದ ಬೆಳ್ತಂಗಡಿಯಲ್ಲಿ ಸಭೆ

error: Content is protected !!
Scroll to Top