ಕೋಡಿಂಬಾಳ: ಎಂಸಿವೈಎಂ ವತಿಯಿಂದ ಗ್ರೀನ್ ಸಂಡೇ ಕಾರ್ಯಕ್ರಮ ➤ ಚರ್ಚ್ ಪರಿಸರದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ಜು.29. ಕೋಡಿಂಬಾಳ ಸಂತ ಜಾರ್ಜ್ ಮಲಂಕರ ಕ್ಯಾಥೊಲಿಕ್‌ ಯೂತ್ ಮೂವ್ ಮೆಂಟ್ (ಎಂ.ಸಿ.ವೈ.ಯಂ) ನ ವತಿಯಿಂದ ಗ್ರೀನ್ ಸಂಡೇ ಆಚರಿಸಲಾಯಿತು.

ಭಾನುವಾರದ ದಿವ್ಯ ಬಲಿಪೂಜೆಯ ನಂತರ ಮಂಗಳೂರು ಉಪ ವಲಯ ಅರಣ್ಯಾಧಿಕಾರಿಗಳಾದ ಕೆ.ಸಿ. ಮಾಥ್ಯು ರವರು ಚರ್ಚ್ ಪರಿಸರದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುತ್ತೂರು ಧರ್ಮಪ್ರಾಂತ್ಯದ ಪ್ರೋಕ್ಯುರೇಟರ್, ಕಿಡ್ಸ್ ನಿರ್ದೇಶಕರು ಹಾಗೂ ಕೋಡಿಂಬಾಳ ಚರ್ಚ್ ಧರ್ಮಗುರುಗಳಾದ ವಂದನೀಯ ರೆ| ಫಾ| ಜಾನ್ ಕುನ್ನತ್ತ್ ರವರು ಗಿಡಗಳನ್ನು ವಿತರಿಸಿ ಪರಿಸರ ಸಂರಕ್ಷಣೆಗೆ ನಾವು ಹೆಚ್ಚಿನ ಆದ್ಯತೆ ಕೊಡುವ ಅಗತ್ಯವಿದೆ. ಕೋಡಿಂಬಾಳ ಯುವ ಘಟಕದ ಗಿಡ ನೆಡುವ ಗ್ರೀನ್ ಸಂಡೇ ಕಾರ್ಯಕ್ರಮಕ್ಕೆ ಶುಭಕೋರಿದರು.

Also Read  ಕಾಡುಪ್ರಾಣಿ ಬೇಟೆ- ಕೋವಿ ಹಾಗೂ ಮಾಂಸ ವಶಕ್ಕೆ; ಆರೋಪಿಗಳು ಪರಾರಿ

ಪಂಜ ವಲಯದ ಅರಣ್ಯ ಇಲಾಖೆಯಿಂದ ಕಾರ್ಯಕ್ರಮಕ್ಕೆ ಬೇಕಾದ ವಿವಿಧ ಬಗೆಯ ಗಿಡಗಳನ್ನು ನೀಡಲಾಗಿತ್ತು. ಕಾರ್ಯಕ್ರಮದಲ್ಲಿ ಚರ್ಚ್ ಟ್ರಸ್ಟೀ ಜೋಸೆಫ್ ತೆಕ್ಕೇಪೂಕಳಂ, ಕಾರ್ಯದರ್ಶಿ ಸನೀಶ್ ಬಿ.ಟಿ, ಯುವ ಘಟಕದ ಅಧ್ಯಕ್ಷರಾದ ಜಿಜೋ ಜಾನ್, ಕಾರ್ಯದರ್ಶಿ ಕುಮಾರಿ ರಮ್ಯ, ಆ್ಯನಿಮೇಟರ್ ಜೆರೀನ್ ವಿ.ಜೆ, ಪದಾಧಿಕಾರಿಗಳು, ಚರ್ಚ್ ಸದಸ್ಯರು ಉಪಸ್ಥಿತರಿದ್ದರು.

error: Content is protected !!
Scroll to Top