ಕಡಿಮೆ ವೇತನವನ್ನು ವಿರೋಧಿಸಿ ಗಾರ್ಮೆಂಟ್ಸ್ ನೌಕರರ ಮುಷ್ಕರ

(ನ್ಯೂಸ್ ಕಡಬ) newskadaba.com ಹಾಸನ, ಜು.24.ಹಾಸನದ ಹಿಮತ್ ಸಿಂಕಾ ಗಾರ್ಮೆಂಟ್ಸ್ ನೌಕರರು ಕಡಿಮೆ ವೇತನ ನೀಡುತ್ತಿರುವುದಾಗಿ ಆರೋಪಿಸಿ ಪ್ರತಿಭಟನೆ ನಡೆಸಿದರು. ಈ ಘಟನೆ ಹಾಸನದಲ್ಲಿ  ನಡೆದಿದೆ.

ತಮಗೆ ಕೊಡಬೇಕಾಗಿರುವ ಬಾಕಿ ಹಣ ಪಾವತಿ ಮಾಡುವಂತೆ ನೌಕರರು ಒತ್ತಾಯಿಸಿದ್ದು, ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಎಲ್ಲಾ ಬೇರೆ ರಾಜ್ಯಗಳ ಜನರೇ ತುಂಬಿಕೊಂಡಿದ್ದಾರೆ ಎಂದು ನೌಕರರು ಆರೋಪಿಸಿದ್ದಾರೆ. ಪ್ರತಿಭಟನಾ ನಿರತ ನೌಕರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ನಡೆಸುತ್ತಿದ್ದ ಪ್ರತಿಭಟನೆ ಹಿಂಸೆಗೆ ತಿರುಗಿದ ಪರಿಣಾಮ ಪೊಲೀಸರು ಅಶ್ರುವಾಯು ಪ್ರಯೋಗ, ಲಾಠಿಚಾರ್ಜ್ ನಡೆಸಿದ್ದು, ಇದರಿಂದ ಹಲವು ನೌಕರರು ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.

Also Read  ಹಳೆ ನೋಟು ಚಲಾವಣೆಗೆ ಯತ್ನ ➤ ಮೂವರು ಆರೋಪಿಗಳನ್ನು ಬಂಧಿಸಿ 30 ಲಕ್ಷ ರೂ. ನೋಟು ವಶ

 

error: Content is protected !!
Scroll to Top