ಪಿಲಿಕುಳದಲ್ಲಿ ವನಮಹೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.24.ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಜುಲೈ 23 ರಂದು ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಿಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಇದರ ಕಮೀಷನರ್ ಡಾ. ಎನ್.ಜಿ. ಮೋಹನ್ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸೈಂಟ್ ರೇಮೆಂಡ್ಸ್ ಕಾಲೇಜು ವಾಂಣಜೂರು ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾವೂರು ಇಲ್ಲಿನ ಎನ್.ಎಸ್.ಎಸ್. ಸ್ವಯಂಸೇವಕರು ಹಾಗೂ ಶುಭೋಧಯ ವಿದ್ಯಾಲಯ ವಾಮಂಜೂರು ಇಲ್ಲಿನ ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂಸೇವಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಬಳಿಕ ನಡೆದ ಸಭಾ ಕಾರ್ಯಕ್ರಮ ನಡೆಯಿತು.

ಕಮೀಷನರ್ ದಕ್ಷಿಣ ಕನ್ನಡ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಡಾ. ಎನ್.ಜಿ. ಮೋಹನ್, ಇವರು ದೀಪ ಬೆಳಗಿಸಿ ಕಾರ್ಯಕ್ರಮ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷರು ಸಸ್ಯಕಾಶಿ ಉಪಸಮಿತಿ, ಪಿಲಿಕುಳ ಡಾ. ಡಿ. ಚಂದ್ರಶೇಖರ ಚೌಟ, ನಿರ್ದೇಶಕರು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಡಾ.ಕೆ.ವಿ.ರಾವ್, ಖ್ಯಾತ ಸಸ್ಯಶಾಸ್ತ್ರಜ್ಞರು, ಉಡುಪಿ ಡಾ.ಕೆ.ಗೋಪಾಲಕೃಷ್ಣ ಭಟ್, ಪ್ರಾಧ್ಯಾಪಕರು, ಮೀನುಗಾರಿಕೆ ಮಹಾವಿದ್ಯಾಲಯ, ಮಂಗಳೂರು ಡಾ. ಎಸ್.ಎಂ. ಶಿವಪ್ರಕಾಶ್, ಮತ್ತು ದಿನೇಶ್ ನಾಯಕ್ ವಿಟ್ಲ ಇವರು ಅತಿಥಿಗಳಾಗಿದ್ದರು. ಕಾರ್ಯನಿರ್ವಾಹಕ ನಿರ್ದೇಶಕರು, ಪಿಲಿಕುಳ ಮೇಘನಾ ಆರ್. ಇವರು ಅಧ್ಯಕ್ಷತೆಯನ್ನು ವಹಿಸಿದ್ದರು.

Also Read  ಮುಂದಿನ 5 ದಿನಗಳು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ➤ ಕರಾವಳಿಯಲ್ಲಿ ಯೆಲ್ಲೋ ಅಲರ್ಟ್‌

ಪ್ರಧಾನ ವಿಜ್ಞಾನಿ, ಪಿಲಿಕುಳ ಡಾ. ಸೂರ್ಯಪ್ರಕಾಶ್ ಶೆಣೈ, ಇವರು ಪ್ರಸ್ತಾಪನೆ ಮಾಡಿ ಅತಿಥಿಗಳನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಖ್ಯಾತ ಸಸ್ಯಶಾಸ್ತ್ರಜ್ಞರು, ಉಡುಪಿ ಡಾ.ಕೆ.ಗೋಪಾಲಕೃಷ್ಣ ಭಟ್, ಇವರು ಸಸ್ಯಶಾಸ್ತ್ರಕ್ಕೆ ನೀಡಿದ ಅಪಾರ ಕೊಡುಗೆಯನ್ನು ಗುರುತಿಸಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಡಾ.ಕೆ.ಗೋಪಾಲಕೃಷ್ಣ ಭಟ್ ಗುರುತಿಸಿದ ಕರ್ಕೂಮ ಭಟ್ಟಿ ಎನ್ನುವ ಅಪರೂಪದ ಸಸ್ಯದ ಸಂರಕ್ಷಣಾ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಹಾಗೂ ಸಿಹಿನೀರಿನ ಮೀನುಮರಿಗಳನ್ನು ಅವುಗಳ ಆವಾಸ ಸ್ಥಾನಕ್ಕೆ ಬಿಡುವ ಕಾರ್ಯಕ್ಕೂ ಚಾಲನೆ ನೀಡಲಾಯಿತು. ಬಳಿಕ ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರು, ಮೀನುಗಾರಿಕೆ ಮಹಾವಿದ್ಯಾಲಯ, ಮಂಗಳೂರು ಡಾ. ಎಸ್.ಎಂ. ಶಿವಪ್ರಕಾಶ್, ಇವರು ಮೀನುವೈವಿಧ್ಯತೆ ಬಗ್ಗೆ ಮತ್ತು ದಿನೇಶ್ ನಾಯಕ್ ವಿಟ್ಲ ಇವರು ಔಷಧಿ ಸಸ್ಯಗಳ ಬಗ್ಗೆ ಉಪನ್ಯಾಸ ನೀಡಿದರು.

Also Read  ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ

error: Content is protected !!
Scroll to Top