ಕಾಣೆಯಾಗಿದ್ದಾರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.23.ಮೂಡಬಿದ್ರೆ ತಾಲೂಕು ಮಂಟ್ರಾಡಿ ಗ್ರಾಮದ ಅರಂತ್ ಹೌಸ್ ಎಂಬಲ್ಲಿನ ನಿವಾಸಿ ಆಶಾ(21) ವರ್ಷ ಜುಲೈ 16 ರಂದು ಬೆಳಿಗ್ಗೆ 10 ಗಂಟೆಗೆ ಮನೆಯಿಂದ ಹೋದವರು, ವಾಪಾಸು ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಮೂಡಬಿದ್ರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


ಕಾಣೆಯಾದವರ ಚಹರೆ ಇಂತಿವೆ: ಎತ್ತರ – 4.5 ಅಡಿ, ಕಪ್ಪು ಮೈಬಣ್ಣ, ಸಣ್ಣ ತೆಳ್ಳಗೆ ಕಪ್ಪು ಕೂದಲು, ಸಾಧಾರಣಾ ಮೈಕಟ್ಟು, ಕೆಂಪು ಟಾಪ್, ಕಪ್ಪು ಪ್ಯಾಂಟ್ ಧರಿಸಿದ್ದರು. ಕನ್ನಡ, ತುಳು ಭಾಷೆ ಮತಾನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ದೂರವಾಣಿ ಸಂಖ್ಯೆ-0824-2220801, 2220800, 0825-8236333 ಸಂಪರ್ಕಿಸಲು ಠಾಣಾಧಿಕಾರಿಗಳು, ಮೂಡಬಿದ್ರೆ ಪೋಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top