ಶಿರಾಡಿ ಘಾಟ್ ರೈಲ್ವೇ ಹಳಿಯಲ್ಲಿನ ಅಪಾಯಕಾರಿ ಬಂಡೆ ತೆರವು ಹಿನ್ನೆಲೆ ➤ ಇಂದು ಮತ್ತು ನಾಳೆ ಮಂಗಳೂರು – ಬೆಂಗಳೂರು ರೈಲು ಸಂಚಾರ ಸ್ಥಗಿತ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜು.20. ಶಿರಾಡಿ ಘಾಟ್‌ ರೈಲು ಮಾರ್ಗದಲ್ಲಿ ಸಿರಿಬಾಗಿಲು ಸಮೀಪದ ಮಣಿಭಾಂಡ ಬಳಿ ರೈಲು ಹಳಿಗೆ ಹೊಂದಿಕೊಂಡಿದ್ದ ಅಪಾಯಕಾರಿ ಬಂಡೆಯನ್ನು ತೆರವುಗೊಳಿಸುವ ಸಲುವಾಗಿ ಎರಡು ದಿನಗಳ ಕಾಲ ಮಂಗಳೂರು – ಬೆಂಗಳೂರು ನಡುವಿನ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಶಿರಾಡಿ ಘಾಟಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಅಪಾಯಕಾರಿ ಬಂಡೆ ಯಾವುದೇ ಕ್ಷಣದಲ್ಲಿ ರೈಲು ಹಳಿಯ ಮೇಲೆ ಉರುಳಿ ಬಿಳುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ರೈಲ್ವೇ ಇಲಾಖೆಯು ಬಂಡೆ ತೆರವು ಕಾರ್ಯ ಆರಂಭಿಸಿದ್ದು, ಅದರಂತೆ ಶನಿವಾರ ಮತ್ತು ಭಾನುವಾರದಂದು ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

Also Read  ಮಂಗಳೂರು: ವಿದ್ಯಾರ್ಥಿ‌ನಿಯ ಜೀವ ರಕ್ಷಣೆ ಮಾಡಿದ ಚಾಲಕ ನಿರ್ವಾಹಕರಿಗೆ ಸನ್ಮಾನ

error: Content is protected !!
Scroll to Top