ಪುತ್ತೂರು: ಆಂಬ್ಯುಲೆನ್ಸ್ ಮತ್ತು ಟೆಂಪೊ ನಡುವೆ ಢಿಕ್ಕಿ ➤ ಮಹಿಳೆ ಮೃತ್ಯು, ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಜು.17. ಟೆಂಪೊವೊಂದು ಆಂಬುಲೆನ್ಸ್‌ಗೆ ಢಿಕ್ಕಿ ಹೊಡೆದ ಪರಿಣಾಮ ಆಂಬುಲೆನ್ಸ್‌ನಲ್ಲಿದ್ದ ರೋಗಿಯೊಬ್ಬರ ಪತ್ನಿ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಮಿತ್ತೂರು ಸಮೀಪ ಮಂಗಳವಾರ ತಡರಾತ್ರಿ ಸಂಭವಿಸಿದೆ.

ಮೃತರನ್ನು ಮಿತ್ತೂರು ಸಮೀಪದ ಏಮಾಜೆ ನಿವಾಸಿ ವಾಮನ ನಾಯ್ಕ ಎಂಬವರ ಪತ್ನಿ ಪಾರ್ವತಿ ಎಂದು ಗುರುತಿಸಲಾಗಿದೆ. ತೀವ್ರ ಅನಾರೋಗ್ಯದಿಂದಾಗಿ ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಾಮನ ನಾಯ್ಕರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆಂದು ಮಹಾವೀರ ಆಸ್ಪತ್ರೆಯ ಆಂಬುಲೆನ್ಸ್‌ನಲ್ಲಿ ಕರೆದೊಯ್ಯುತ್ತಿರುವ ವೇಳೆ ಮಿತ್ತೂರು ಸಮೀಪದ ಪರ್ಲೊಟ್ಟು ಎಂಬಲ್ಲಿ ದಿಕ್ಕಿನಿಂದ ಬಂದ ಟೆಂಪೊವೊಂದು ಆಂಬುಲೆನ್ಸ್‌ಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಆಂಬುಲೆನ್ಸ್ ಪಲ್ಟಿಯಾಗಿ ಪಕ್ಕದ ಕಮರಿಗೆ ಉರುಳಿದ್ದರಿಂದ ಆಂಬುಲೆನ್ಸ್‌ನಲ್ಲಿದ್ದ ರೋಗಿ ವಾಮನ ನಾಯ್ಕರ ಪತ್ನಿ ಪಾರ್ವತಿ ಸ್ಥಳದಲ್ಲೇ ಮೃತಪಟ್ಟು, ರೋಗಿ ವಾಮನ ನಾಯ್ಕ, ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.

Also Read  ಚಿರತೆಯ ಬೆನ್ನಲ್ಲೇ ಕಾಡುಕೋಣಗಳ ಹಾವಳಿ...! ➤ ಪುತ್ತೂರಿನಲ್ಲಿ ಗದ್ದೆಗೆ ದಾಳಿ ಮಾಡಿ ಅಪಾರ ಪೈರು ನಾಶಮಾಡಿದ ಕಾಡುಕೋಣ

error: Content is protected !!
Scroll to Top