ಶಕ್ತಿ ರೆಸಿಡೆಂಟಿಯಲ್ ಸ್ಕೂಲ್ ➤ ವಿವಿಧ ಸಂಘಗಳ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.13.ಪಠ್ಯದೊಂದಿಗೆ ಪಠ್ಯೇತರ ವಿಷಯಗಳು ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿರುತ್ತವೆ. ವಿದ್ಯಾರ್ಥಿಗಳು ಕ್ರಿಯಾಶೀಲ ಚಟುವಟಿಕೆಗಳನ್ನು ಬಾಲ್ಯದಿಂದಲೇ ಅಳವಡಿಸಿಕೊಳ್ಳಬೇಕು.

ಅದನ್ನುಕಲಿಯುವಲ್ಲಿ ಪ್ರೀತಿ, ಆಸಕ್ತಿ, ಶ್ರದ್ಧೆ, ಪ್ರಯತ್ನವೂಅತ್ಯಗತ್ಯಎಂದು ಶಕ್ತಿ ನಗರದ ಶಕ್ತಿ ವಸತಿ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನಾಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿದ ಪ್ರಸಿದ್ಧ ಚಿತ್ರಕಲಾವಿದಗಣೇಶ್ ಸೋಮಾಯಾಜಿ ಶಾಲಾ ವಿದ್ಯಾರ್ಥಿಗಳನ್ನುದ್ದೇಶಿಸಿ ಹೇಳಿದರು. ಪ್ರಕೃತಿಯಲ್ಲಿನ ಸಂಗತಿಗಳನ್ನು ನಿಮಿಷಾರ್ಧದಲ್ಲಿ ಗ್ರಹಿಸಿ ಅದನ್ನುಕಾರ್ಯರೂಪಕ್ಕೆತರುವ ವಿಶೇಷ ಶಕ್ತಿ ಚಿತ್ರಕಲೆಗಿದೆ. ವಿದ್ಯಾರ್ಥಿಗಳುಅದರ ಸಾಧ್ಯತೆಗಳನ್ನು ಅರಿತು, ಕಲಿಯಬೇಕೆಂದುಹೇಳುತ್ತಾ ಚಿತ್ರಕಲೆಯಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಪ್ರಕೃತಿಚಿತ್ರಣದಆಕರ್ಷಕ ಪ್ರಾತ್ಯಕ್ಷಿಕೆಯನ್ನು ಸೋಮಯಾಜಿ ನೀಡಿದರು.ಇನ್ನೋರ್ವಅತಿಥಿ ಪ್ರಸಿದ್ಧ ಕವಯಿತ್ರಿಚಂದ್ರಕಲಾ ನಂದಾವರ ಇಂದಿನ ವಿಜ್ಞಾನ, ಸಂಗೀತ, ಚಿತ್ರಕಲೆಗಳಂತಹಎಲ್ಲಾಆಧುನಿಕ ವಿಷಯಗಳ ಮೂಲ ಆಗರವೇ ನಮ್ಮ ಪೂರ್ವಜರಜ್ಞಾನ. ಆ ಜ್ಞಾನವೇ ಇಂದಿನ ವಿಜ್ಞಾನದ ಮುನ್ನುಡಿ, ಹಾಗಾಗಿ ವಿದ್ಯಾರ್ಥಿಗಳು ಪಾಠದಜ್ಞಾನವನ್ನುಗಳಿಸುವುದರ ಜೊತೆಗೆ ಕಲೆ, ಸಂಗೀತ, ನೃತ್ಯ, ಲಲಿತ ಕಲೆಗಳಂತಹ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪಠ್ಯೇತರ ಚಟುವಟಿಕೆಗಳ ಮಹತ್ವವನ್ನುಕುರಿತು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

Also Read  ಕರಾವಳಿ ಜನತೆಗೊಂದು ಸಂತಸದ ಸುದ್ದಿ ► ನಾಳೆಯಿಂದ ಕರಾವಳಿ ಉತ್ಸವ ಆರಂಭ

ಶಕ್ತಿ ಎಜ್ಯುಕೇಶನ್‍ಟ್ರಸ್ಟ್‍ನ ಕಾರ್ಯದರ್ಶಿ ಹಾಗೂ ಶಾಲಾ ಸಂಚಾಲಕ ಸಂಜಿತ್ ನಾೈಕ್ ಸಭಾಧ್ಯಕ್ಷತೆಯನ್ನು ವಹಿಸಿದ್ದರು,ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ.ಸಿ ನಾೈಕ್, ಸಂಚಾಲಕ ಸಂಜಿತ್‍ನಾೈಕ್, ಸಂಸ್ಥೆಯ ಆಡಳಿತಾಧಿಕಾರಿ ಬೈಕಾಡಿಜನಾರ್ದನಆಚಾರ್, ಸಂಸ್ಥೆಯಅಭಿವೃದ್ಧಿಅಧಿಕಾರಿ ನಸೀಮ್ ಬಾನು, ಶಕ್ತಿ ಪಿ.ಯುಕಾಲೇಜಿನಪ್ರಾಂಶುಪಾಲರಾದ ಪ್ರಭಾಕರಜಿ.ಎಸ್ ಉಪಸ್ಥಿತರಿದ್ದರು.ಶಾಲಾಪ್ರಾಂಶುಪಾಲೆ ವಿದ್ಯಾಕಾಮತ್ ಜಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಮಾರಿಚಿನ್ಮಯಿ ವಿವಿಧ ಸಂಘಗಳ ಮಹತ್ವವನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಕುಮಾರಿ ಸಿಂಚನ ಅತಿಥಿಗಳನ್ನು ಸ್ವಾಗತಿಸಿ, ರಿಷಿಕ್ ವಂದಿಸಿದರು. ಸಿದ್ಧಾಂತ್ ಆಚಾರ್ಯಕಾರ್ಯಕ್ರಮ ನಿರೂಪಿಸಿದರು.

Also Read  ಮಾಜಿ ಸೈನಿಕರ ಮಕ್ಕಳಿಗೆ ಜನರಲ್ ಕೆ.ಎಸ್. ತಿಮ್ಮಯ್ಯ ನಗದು ಪ್ರಶಸ್ತಿಗೆ ಅರ್ಜಿ ಆಹ್ವಾನ

error: Content is protected !!
Scroll to Top