ಸ್ಮಾರ್ಟ್ ಸಿಟಿ ಹಸಿರು ಅಭಿಯಾನಕ್ಕೆ ಚಾಲನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.13.ಜಿಲ್ಲಾಡಳಿತ ದ.ಕ ಜಿಲ್ಲೆ, ಮಂಗಳೂರು ಮಹಾನಗರಪಾಲಿಕೆ, ಅರಣ್ಯ ಇಲಾಖೆ, ಮಂಗಳೂರು ಸ್ಮಾರ್ಟ್ ಸಿಟಿ ಲಿ., ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾಲಯ , ಭಾರತ್ ಸ್ಕೌಟ್ ಎಂಡ್ ಗೈಡ್ಸ್ ದ.ಕ ಜಿಲ್ಲೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಟಿ.ಎಂ.ಎ. ಪೈ ಕನ್ವೆನ್ಷನ್ ಹಾಲ್‍ನಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಂಗಳ್ರರು ಸ್ಮಾರ್ಟ್ ಸಿಟಿ ಏರ್ಪಡಿಸಿರುವ ಮಂಗಳ್ರರು ಹಸಿರು ಅಭಿಯಾನಕ್ಕೂ ಚಾಲನೆ ನೀಡಲಾಯಿತು.

ಮಂಗಳೂರು ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಹೆಚ್ ನಾರಾಯಣಪ್ಪ ಈ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.ಕಳೆದ ವರ್ಷಗಳಲ್ಲಿ ಶೇಕಡಾ 50 ಕ್ಕಿಂತಲೂ ಹೆಚ್ಚು ಮಂಗಳೂರಿನ ನೈಸರ್ಗಿಕ ಹಸಿರಿನ ವಾತಾವರಣ ಕಡಿಮೆಯಾಗಿದ್ದು ಪ್ರಸ್ತುತ ನಾವು ಅನುಭವಿಸುತ್ತಿರುವ ವ್ಯತಿರಿಕ್ತ ಹವಾಮಾನ ಬದಲಾವಣೆಯು ಪ್ರತಿಕೂಲ ಪರಿಣಾಮ, ಈ ಮೂಲಕ ಸ್ಪಷ್ಟವಾಗಿ ತೋರುತ್ತದೆ.

Also Read  ಸೆಪ್ಟೆಂಬರ್ ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಶನಿವಾರದಂದು ಫುಲ್ ಕ್ಲಾಸ್

ನಗರದ ಹಸಿರು ವಾತಾವರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಂಗಳೂರನ್ನು ಮತ್ತೆ ಹೆಚ್ಚು ಹಸಿರುಮಯವಾಗಿಸಲು, ನಿರ್ಧಿಷ್ಟ ಕಾರ್ಯಕ್ರಮವನ್ನು ಸಾರ್ವಜನಿಕ ಭಾಗವಹಿಸುವಿಕೆಯೊಂದಿಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಲು, ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಹಸಿರು ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಒನ್ ಸ್ಮಾರ್ಟ್ ಸಿಟಿ ಒನ್ ಇಂಪ್ಯಾಕ್ಟ್ ಧ್ಯೇಯದೊಂದಿಗೆ ನೂರು ದಿನಗಳ ಕಾರ್ಯಕ್ರಮವನ್ನು ಅಕ್ಟೋಬರ್ 2 ರ ವರೆಗೆ ಸ್ಮಾರ್ಟ್ ಸಿಟಿ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಮುಂದುವರಿಕೆಯಾಗಿ ಮುಂಬರುವ ವರ್ಷದಲ್ಲಿ (2020) 10000 ಮರದ ಸಸಿಗಳನ್ನು ನೆಡಲು ಯೋಜಿಸಲಾಗಿದೆ.

Also Read  ಕುಕ್ಕೇ ಸುಬ್ರಹ್ಮಣ್ಯ: ಸೆಪ್ಟೆಂಬರ್ 12ರಂದು ಶ್ರೀ ದೇವಳದಲ್ಲಿ ಹೊಸ್ತಾರೋಗಣೆ

error: Content is protected !!
Scroll to Top