(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜು.12. ಇಲ್ಲಿನ ಖಾಸಗಿ ವಸತಿ ಗೃಹವೊಂದರಲ್ಲಿ ಕೊಠಡಿ ಪಡೆದು ಜೊತೆಗಿದ್ದ ಭಿನ್ನ ಕೋಮಿನ ಜೋಡಿಯನ್ನು ಪತ್ತೆ ಹಚ್ಚಿರುವ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಗುರುವಾರ ರಾತ್ರಿ ಸುಬ್ರಹ್ಮಣ್ಯದಲ್ಲಿ ನಡೆದಿದೆ.
ಭಿನ್ನ ಕೋಮಿನ ಯುವಕ ಹಾಗೂ ಯುವತಿ ಜೊತೆಗಿರುವುದರಿಂದ ಅನುಮಾನಗೊಂಡ ಸ್ಥಳೀಯ ಹಿಂದೂ ಸಂಘಟನೆಗಳ ಕಾರ್ಯಕರ್ತರು ಅವರನ್ನು ಸುಬ್ರಹ್ಮಣ್ಯ ಠಾಣೆಗೆ ಒಪ್ಪಿಸಿದ್ದಾರೆ. ಜೋಡಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ ಬಳಿಕ ಮುಚ್ಚಳಿಕೆ ಬರೆದು ಹೆತ್ತವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ.
Also Read ಮಂಗಳೂರು: ಕರಾವಳಿಗೆ ಕಾಲಿಟ್ಟ ಹಿಂಗಾರು ಮಳೆ ► ಬಂದರ್ ನಲ್ಲಿ ಚಂಡಮಾರುತದ ಬಗ್ಗೆ ಮೈಕ್ ಮೂಲಕ ಎಚ್ಚರಿಕೆ..!!