(ನ್ಯೂಸ್ ಕಡಬ) newskadaba.com ಇಟಲಿ, ಜುಲೈ.11.ಭಾರತದ ಶ್ರೇಷ್ಠ ಓಟಗಾರ್ತಿ ದ್ಯುತಿ ಚಂದ್ ಜಾಗತಿಕ ಮಟ್ಟದ ವೇಗದ ಓಟದಲ್ಲಿ ಚಿನ್ನ ಗೆದ್ದ ಭಾರತದ 2ನೇ ಸಾಧಕಿಯಾಗಿದ್ದಾರೆ. ಇಟಲಿಯಲ್ಲಿ ನಡೆದ ವಿಶ್ವ ವಿಶ್ವವಿದ್ಯಾನಿಲಯ ಕೂಟದ 100 ಮೀ. ವೇಗದ ಓಟದಲ್ಲಿ ದಾಖಲೆಯ ಚಿನ್ನದ ಪದಕ ಗೆದ್ದಿದ್ದಾರೆ.
11.32 ಸೆಕೆಂಡ್ಸ್ ಗಳಲ್ಲಿ ಗುರಿ ತಲುಪಿ ಹಲವಾರು ದಾಖಲೆ ಬರೆದಿದ್ದಾರೆ.ಜಾಗತಿಕ ಮಟ್ಟದ 100 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಆ್ಯತ್ಲೀಟ್ ಎಂಬುದು ದ್ಯುತಿ ಸಾಧನೆ. ಈ ಕೂಟದ ಟ್ರ್ಯಾಕ್ ಆ್ಯಂಡ್ ಫೀಲ್ಡ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಹಾಗೂ ಈ ಕೂಟದ ಟ್ರ್ಯಾಕ್ ಆ್ಯಂಡ್ ಫೀಲ್ಡ್‌ನಲ್ಲಿ ಪದಕ ಗೆದ್ದ ಭಾರತದ 2ನೇ ಸ್ಪರ್ಧಿ. 23 ವರ್ಷದ ದ್ಯುತಿ 11.32 ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿದರು. ರೇಸ್‌ನ ಆರಂಭದಿಂದಲೂ ದ್ಯುತಿ ಮುನ್ನಡೆ ಕಾಯ್ದುಕೊಂಡು ಚಿನ್ನದ ನಗು ಬೀರಿದರು. “ಕಠಿನ ಪರಿಶ್ರಮ, ಹಿರಿಯರ ಆಶೀರ್ವಾದದ ಬಲದಿಂದ ವಿಶ್ವ ಮಟ್ಟದಲ್ಲಿ ಮಿಂಚಲು ಸಾಧ್ಯವಾಗಿದೆ’ ಎಂದು ಗೆಲುವಿನ ಅನಂತರ ದ್ಯುತಿ ಪ್ರತಿಕ್ರಿಯಿಸಿದ್ದಾರೆ.