ವಿಟ್ಲ: ಅಪ್ರಾಪ್ತ ಬಾಲಕಿಯ ಮೇಲೆ ಐವರಿಂದ ಅತ್ಯಾಚಾರ ➤ ಪ್ರಕರಣ ತಡವಾಗಿ ಬೆಳಕಿಗೆ ➤ ಗ್ರಾ.ಪಂ. ಸಿಬ್ಬಂದಿ ಸಹಿತ ಮೂವರು ಪೊಲೀಸ್ ವಶಕ್ಕೆ



(ನ್ಯೂಸ್ ಕಡಬ) newskadaba.com ವಿಟ್ಲ, ಜು.09. ಅಪ್ರಾಪ್ತ ವಯಸ್ಸಿನ ದಲಿತ ಬಾಲಕಿಯ ಮೇಲೆ ಸರಣಿ ಅತ್ಯಾಚಾರ ನಡೆಸಿರುವ ಘಟನೆ ವಿಟ್ಲದಿಂದ ತಡವಾಗಿ ಬೆಳಕಿಗೆ ಬಂದಿದ್ದು, ಗ್ರಾಮ ಪಂಚಾಯತ್ ಸಿಬ್ಬಂದಿ ಸಹಿತ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.





ವಿಟ್ಲ ಸಮೀಪದ ಮುಡ್ನೂರಿನ ಬಾಲಕಿಯ ಮೇಲೆ ಐವರು ಆರೋಪಿಗಳು ವಿವಿಧ ಸಂದರ್ಭಗಳಲ್ಲಿ ಅತ್ಯಾಚಾರ ಎಸಗಿದ್ದು, ಇದೀಗ ಬಾಲಕಿಯ ಆರೋಗ್ಯದಲ್ಲಿ ಏರು ಪೇರಾದುದರಿಂದ ಈ ಬಗ್ಗೆ ಪೊಲೀಸರಿಗೆ ದೂರು ಬೀಡಿದ್ದಾಳೆ. ಬಾಲಕಿಯ ದೂರಿನಂತೆ ಎಸ್ಸಿ-ಎಸ್ಟಿ ಹಾಗೂ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ಮುಡ್ನೂರು ಗ್ರಾಮ ಪಂಚಾಯತ್‌ನ ತೆರಿಗೆ ಸಂಗ್ರಾಹಕ ಕೃಷ್ಣ ನಾಯ್ಕ್ (38), ಆಟೊ ಚಾಲಕ ಧನುಷ್ ನಾಯ್ಕ್(23) ಹಾಗೂ ಸಂತ್ರಸ್ತೆಯ ಸಂಬಂಧಿಕ ಗಣೇಶ್ ಎಂಬವರನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.






error: Content is protected !!
Scroll to Top