ಮಗುವಿನ ಪೋಷಕರ ಪತ್ತೆಗಾಗಿ ಮನವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.6.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಅಪಾರ್ಟ್‍ಮೆಂಟ್ ನಲ್ಲಿ ತಾಯಿಯಾದ ಮುಸ್ಕಾನ್ ಸುಮಾರು 6 ತಿಂಗಳು ಪ್ರಾಯದ ಮಗುವನ್ನು ತೊರೆದು ಹೋಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮಂಗಳೂರು ಇವರ ಆದೇಶದನ್ವಯ ಪಾಲನೆ ಹಾಗೂ ಪೋಷಣೆಗಾಗಿ ವಾತ್ಸಲ್ಯಧಾಮ ದತ್ತು ಕೆಂದ್ರ, ಶ್ರೀ ರಾಮಕೃಷ್ಣ ಸೇವಾ ಸಮಾಜ ಪುತ್ತೂರು ಇಲ್ಲಿ ದಾಖಲಿಸಲಾಗಿದೆ. ಈ ಮಗುವಿನ ವಾರಸುದಾರರು ಯಾರಾದರೂ ಇದ್ದಲ್ಲಿ 60 ದಿನದೊಳಗೆ ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ,1ನೇ ಮಹಡಿ, ಜಿಲ್ಲಾಧಿಕಾರಿಗಳಕಚೇರಿ, ದ.ಕ ಮಂಗಳೂರು 575001, ದೂರವಾಣಿ ಸಂಖ್ಯೆ: 0824-2440004/ 9482756407/ 08/09 ಇ-ಮೇಲ್ dcpu.mnglr@gmail.com ಸಂಪರ್ಕಿಸಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Also Read  ಕಡಬ: ಜ್ಯೂಸ್ ಕುಡಿಯಲು ಬಂದ ಹುಡುಗಿಯ ಫೋಟೋ ಸ್ಟೇಟಸ್ ಹಾಕಿದ ಪ್ರಕರಣ ➤ ಆರೋಪಿಯ ವಿರುದ್ಧ ಸೈಬರ್ ಕ್ರೈಮ್ ಕಾಯ್ದೆಯಡಿ ಕೇಸ್

error: Content is protected !!
Scroll to Top