ಗ್ಯಾಂಗ್ ರೇಪ್ ಮಾಸುವ ಮುನ್ನವೇ ಮತ್ತೊಂದು ವಿದ್ಯಾರ್ಥಿನಿಯ ಅತ್ಯಾಚಾರ ➤ 15 ವರ್ಷದ ಬಾಲಕಿಯ ಅತ್ಯಾಚಾರಕ್ಕೆ ಬೆಚ್ಚಿ ಬಿದ್ದ ಪುತ್ತೂರು

(ನ್ಯೂಸ್ ಕಡಬ) newskadaba.com ಪುತ್ತೂರು, ಜು.05. ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಬೆಚ್ಚಿಬಿದ್ದಿದ್ದ ಪುತ್ತೂರಿನಲ್ಲಿ ಮತ್ತೊಂದು ಅಂತಹುದೇ ಪ್ರಕರಣ ಶುಕ್ರವಾರದಂದು ನಡೆದಿದ್ದು, ಪ್ರೌಢಶಾಲಾ ವಿದ್ಯಾರ್ಥಿನಿಯ ಮೇಲೆ ವಿವಾಹಿತ ವ್ಯಕ್ತಿಯೋರ್ವ ಅತ್ಯಾಚಾರ ನಡೆಸಿದ್ದು, ಆರೋಪಿಯನ್ನು ಬಂಧಿಸಿರುವ ಪುತ್ತೂರು ಗ್ರಾಮಾಂತರ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಬಾಲಕಿಯ ಮನೆಯ ನೆರೆಯವನಾದ ಅಜಿತ್ ಎಂದು ಗುರುತಿಸಲಾಗಿದೆ. ಪುತ್ತೂರಿನ ಪ್ರೌಢಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ಶುಕ್ರವಾರ ಬೆಳಿಗ್ಗೆ ಏಳು ಗಂಟೆಗೆ ಶಾಲೆಗೆ ಹೋಗುವ ಸಮಯ ಆರೋಪಿಯು ಸುಳ್ಳು ಹೇಳಿ ಬಾಲಕಿಯನ್ನು ಕೈ ಹಿಡಿದು ಎಳೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ.

Also Read  ಬಿಳಿಯಾರಿನಲ್ಲಿ ಕಾಳಿಂಗ ಸರ್ಪ ಸೆರೆ

ಈ ವೇಳೆ ಪ್ರಜ್ಞೆ ತಪ್ಪಿ ಬಿದ್ದಿದ್ದ ಬಾಲಕಿಯು ಸ್ವಲ್ಪ ಹೊತ್ತು ಕಳೆದು ಎಚ್ಚರವಾದಾಗ ಧರಿಸಿದ್ದ ಸಮವಸ್ತ್ರ ಅಸ್ತವ್ಯಸ್ತವಾಗಿ ಬಿದ್ದಿದ್ದು, ನಂತರ ಬಾಲಕಿಯು ಆಯಾಸಗೊಂಡು ಮನೆಗೆ ಹೋಗಿ ಮಲಗಿದ್ದಾಳೆ. ಆ ಸಮಯದಲ್ಲಿ ಮನೆಯವರು ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಬಂದಿದ್ದು, ಆ ವೇಳೆ ಬಾಲಕಿಯ ಮೇಲೆ ಅಜಿತ್ ಅತ್ಯಾಚಾರ ಎಸಗಿರುವುದು ತಿಳಿದುಬಂದಿದೆ.

error: Content is protected !!
Scroll to Top