ಅಡ್ಯಾರ್ ಗ್ರಾಮ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.4.ಮಂಗಳೂರು ತಾಲೂಕು ಅಡ್ಯಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ 2019-20ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆ ಜುಲೈ 9 ರಂದು ಬೆಳಿಗ್ಗೆ 11 ಗಂಟೆಗೆ ಅಡ್ಯಾರ್ ಗ್ರಾಮ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.


ಅಡ್ಯಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಕುಳ ಗ್ರಾಮದ 2019-20ನೇ ಸಾಲಿನಲ್ಲಿ ನಡೆಯುವ ಪ್ರಥಮ ಸುತ್ತಿನ ವಾರ್ಡು ಸಭೆಗಳು ಇಂತಿವೆ; 3, 4 ನೇ ವಾರ್ಡು ಸಭೆ ಜುಲೈ 5 ರಂದು ಅಪರಾಹ್ನ 3.30 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ, ವಳಚ್ಚಿಲ್ ಪದವು, 2 ನೇ ವಾರ್ಡ್ ಸಭೆ ಜುಲೈ 6 ರಂದು ಅಪರಾಹ್ನ 3 ಗಂಟೆಗೆ ಅರ್ಕುಳ ಚಾರಿಟೇಬಲ್ ಟ್ರಸ್ಟ್ ತುಪ್ಪೆಕಲ್ಲು, 1 ನೇ ವಾರ್ಡ್ ಸಭೆ ಅಪರಾಹ್ನ 4.30 ಗಂಟೆಗೆ ಸಹೋದರ ಸೇವಾ ಸಂಘ ಅರ್ಕುಳ, ಇಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Also Read  ರ‍್ಯಾಪರ್ ಚಂದನ್ ಶೆಟ್ಟಿಗೆ ಸಂಕಷ್ಟ ತಂದ 'ಕೋಲು ಮಂಡೆ ಜಂಗಮ ದೇವರು" ಹಾಡು

error: Content is protected !!
Scroll to Top