ಪುತ್ತೂರು: ಕಾಲೇಜು ವಿದ್ಯಾರ್ಥಿನಿಯ ಗ್ಯಾಂಗ್ ರೇಪ್ ➤ ಐವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಜು.03. ಪುತ್ತೂರಿನ ಕಾಲೇಜೊಂದರ ವಿದ್ಯಾರ್ಥಿನಿಯನ್ನು ಸಾಮೂಹಿಕ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.

ಬಂಧಿತ ಆರೋಪಿಗಳನ್ನು ಬಜತ್ತೂರು ಗ್ರಾಮದ ಗಾಣದಮೂಲೆ‌ ನಿವಾಸಿ ರಾಧಾಕೃಷ್ಣ ಎಂಬವರ ಪುತ್ರ ಗುರುನಂದನ್(19), ಪೆರ್ನೆ ಗ್ರಾಮದ ರಾಜಶ್ರೀ ಕೃಪ ನಿವಾಸಿ ನಾಗೇಶ್ ನಾಯ್ಕ್ ಎಂಬವರ ಪುತ್ರ ಪ್ರಜ್ವಲ್(19), ಪೆರ್ನೆ ಗ್ರಾಮದ ಕಡಂಬು ನಿವಾಸಿ ಸದಾಶಿವ ಎಂಬವರ ಪುತ್ರ ಕಿಶನ್(19), ಆರ್ಯಾಪು ಗ್ರಾಮದ ಪಿಲಿಗುಂಡ ನಿವಾಸಿ ಕಾಂತಪ್ಪ ಗೌಡ ಎಂಬವರ ಪುತ್ರ ಸುನಿಲ್(19) ಹಾಗೂ ಬರಿಮಾರು ಗ್ರಾಮದ ಬಲ್ಯ ನಿವಾಸಿ ಸುಬ್ಬಣ್ಣ ಶೆಟ್ಟಿ ಎಂಬವರ ಪುತ್ರ ಪ್ರಖ್ಯಾತ್(19) ಎಂದು ಗುರುತಿಸಲಾಗಿದೆ.

Also Read  ಪತ್ರಕರ್ತನಿಗೂ ವಕ್ಕರಿಸಿದ ಕೊರೋನಾ ➤ ಪ್ರೆಸ್ ಕ್ಲಬ್ ಸೀಲ್ ಡೌನ್

ಆರೋಪಿಗಳು ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಪುತ್ತೂರಿನ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಲ್ಲದೆ, ವೀಡಿಯೋ ಚಿತ್ರಿಸಿದ್ದರು. ಈ ವಿಚಾರವನ್ನು ಯಾರಲ್ಲಿಯೂ ಹೇಳದಂತೆ ಜೀವ ಬೆದರಿಕೆ ಒಡ್ಡಿ, ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಪಡಿಸುವುದಾಗಿ ಬೆದರಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top