ಚರಂಡಿಗೆ ಬಿದ್ದ ಎರಡು ಬಸ್ಸುಗಳು ➤ ಅಪಾಯದಿಂದ ಪಾರಾದ ಪ್ರಯಾಣಿಕರು



(ನ್ಯೂಸ್ ಕಡಬ) newskadaba.com ವಿಟ್ಲ, ಜುಲೈ.2.ವಿಟ್ಲ ಸಮೀಪದ ಮಿತ್ತೂರು ಎಂಬಲ್ಲಿ ಬೆಂಗಳೂರು ಕಡೆಯಿಂದ ಬರುತ್ತಿದ್ದ ಖಾಸಗಿ ಹಾಗೂ ಕೆಎಸ್ಆರ್ಟಿಸಿ ಬಸ್ ಗಳು ಸ್ಪಲ್ಪ ಅಂತರದಲ್ಲಿ ಒಂದೇ ಸ್ಥಳದಲ್ಲಿ ಚರಂಡಿಗೆ ಉರುಳಿದ ಘಟನೆ ಸಂಭವಿಸಿದೆ.







ಬೆಂಗಳೂರಿನಿಂದ ನಿನ್ನೆ ರಾತ್ರಿ ಮಂಗಳೂರಿಗೆ ಹೊರಟ ಖಾಸಗಿ ಬಸ್ ಮಿತ್ತೂರು ತಿರುವಿನಲ್ಲಿ ಹಾಲಿನ ವಾಹನವನ್ನು ತಪ್ಪಿಸುವ ಭರದಲ್ಲಿ ಚಾಲಕನ ನಿಯಂತ್ರಣ ಕಳೆದು ರಸ್ತೆ ಬದಿಗೆ ವಾಲಿ ನಿಂತಿದೆ. ಈ ಘಟನೆ ನಡೆದು ಸ್ಪಲ್ಪ ಹೊತ್ತಿನಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಇನ್ನೊಂದು ಕೆಎಸ್ ಆರ್ ಟಿಸಿ ಐರಾವತ ಬಸ್ ಅದೇ ಸ್ಥಳದಲ್ಲಿ ಚರಂಡಿಗಿಳಿದು ವಾಲಿ ನಿಂತಿದೆ. ಬಸ್ ಚರಂಡಿಗಿಳಿರುವುದನ್ನು ನೋಡುತ್ತ ಚಾಲಕ ಸಡನ್  ಬ್ರೇಕ್ ಹಾಕಿದ್ದಾರೆ. ಇದರಿಂದ ಬಸ್ ಚರಂಡಿಗಿಳಿದಿದೆಯೆನ್ನಲಾಗಿದೆ. ಪ್ರಯಾಣಿಕರು ಅಪಾಯದಿಂದ  ಪಾರಾಗಿದ್ದಾರೆ.






error: Content is protected !!
Scroll to Top