ಕೃಷಿ ವಿಜ್ಞಾನ ಕೇಂದ್ರದಲ್ಲಿ ಭತ್ತದ ಬೀಜ ಮಾರಾಟಕ್ಕೆ ಲಭ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.2.ಬೀದರ್ ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಭತ್ತದ ಬೀಜ ಮಾರಾಟಕ್ಕಿದೆ.


ಕೃಷಿ ವಿಜ್ಞಾನ ಕೇಂದ್ರದ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಎ.ಟಿ. ರಾಮಚಂದ್ರ ನಾಯ್ಕ ರವರು ಕೇಂದ್ರದಲ್ಲಿ ಉತ್ಪಾದಿಸಿದ ಎಂ.ಒ.-4 ತಳಿಯ ಭತ್ತದ ಬೀಜ ಮಾರಾಟಕ್ಕೆ ಲಭ್ಯತೆ ಇದೆ ಎಂದು ಹೇಳಿದ್ದಾರೆ.ಮಾರಾಟದ ಜೊತೆಗೆ ಈ ತಳಿಯ ವೈಜ್ಞಾನಿಕ ಕೃಷಿ ಮಾಡುವ ಪದ್ದತಿಯನ್ನು ತಿಳಿಸಿಕೊಡಲು ಹೆಚ್ಚಿನ ಮಾಹಿತಿಗೆ ಕೇಂದ್ರದ ಪ್ರಧಾನ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಎ.ಟಿ. ರಾಮಚಂದ್ರ ನಾಯ್ಕ (ಮೊ: 99169 24084) ಮತ್ತು ಬೇಸಾಯ ಶಾಸ್ತ್ರದ ವಿಜ್ಞಾನಿ ಡಾ. ನವೀನ್ ಕುಮಾರ್ ಬಿ.ಟಿ. (ಮೊ: 82969 21796) ರವರನ್ನು ಸಂಪರ್ಕಿಸಬಹುದಾಗಿದೆ.

Also Read  ಮಂಗಳೂರು: 21ನೇ ವಯಸ್ಸಿಗೆ ಪೈಲೆಟ್ ಆದ ಕರಾವಳಿಯ ಯುವತಿ

 

ಜುಲೈ 1  ರಂದು ಬೆಳಿಗ್ಗೆ 9.30 ರಿಂದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಾರಾಟ ಪ್ರಾರಂಭವಾಗಲಿದೆ. ಮಾರಟಕ್ಕಿರುವ ಈ ತಳಿಯನ್ನು ಕೊಂಡುಕೊಳ್ಳಲು ದೂರವಾಣಿ ಸಂಖ್ಯೆ 0824 2431872 ಅಥವಾ 9916924084 ಸಂಪರ್ಕಿಸಬಹುದಾಗಿದೆ, ಮೊದಲು ಬಂದವರಿಗೆ ಆದ್ಯತೆ ಕೊಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

error: Content is protected !!
Scroll to Top