ಮಂಗಳೂರು: ರನ್ ವೇ ಯಿಂದ ಹೊರ ಜಾರಿದ ವಿಮಾನ ➤ ತಪ್ಪಿದ ಭಾರೀ ದುರಂತ, ದುಬೈನಿಂದ ಆಗಮಿಸಿದ ಪ್ರಯಾಣಿಕರು ಸೇಫ್

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.30. ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2010ರ ಭೀಕರ ವಿಮಾನ ದುರಂತ ಘಟನೆ ಮಾಸುವ ಮುನ್ನವೇ ಭಾನುವಾರದಂದು ಭಾರೀ ದುರಂತವೊಂದು ಕೂದಲೆಲೆಯ ಅಂತರದಲ್ಲಿ ತಪ್ಪಿದ್ದು, 183 ಪ್ರಯಾಣಿಕರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

ಭಾನುವಾರ ಸಂಜೆ 05.40ಕ್ಕೆ ದುಬೈನಿಂದ ಮಂಗಳೂರಿಗೆ ಆಗಮಿಸಿದ ಏರ್ ಇಂಡಿಯಾ ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ರನ್ ವೇನಿಂದ ಜಾರಿ ಸಾಕಷ್ಟು ಮುಂದೆ ಬಂದಿದ್ದು, ಪೈಲೆಟ್ ನ ಸಮಯ ಪ್ರಜ್ಞೆಯಿಂದಾಗಿ ಸುಗಮವಾಗಿ ಲ್ಯಾಂಡ್ ಆಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನಗಳ ಆಗಮನ ಮತ್ತು ನಿರ್ಗಮನವನ್ನು ಸ್ಥಗಿತಗೊಳಿಸಲಾಗಿದೆ. ಘಟನೆಗೆ ಕಾರಣವೇನೆಂದು ತಿಳಿದುಬಂದಿಲ್ಲವಾದರೂ ವಿಮಾನಯಾನ ಸಚಿವಾಲಯವು ತನಿಖೆಗೆ ಆದೇಶಿಸಿದೆ.

Also Read  ಸಂಗಾತಿಯ ಪ್ರೇಮ ವಶ ಮತ್ತು ದಿನ ಭವಿಷ್ಯವನ್ನು ನೋಡಿ

error: Content is protected !!
Scroll to Top